16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಿದೆ :ಪ್ರೊ.ಎ.ಬಿ.ಒಡೆಯರ

Share the Post Now

12 ನೇ ಶತಮಾನದಲ್ಲಿ ಶರಣ ಸಾಹಿತ್ಯದ ಮೂಲಕ ಬಸವಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದರು ಅದೇ ರೀತಿ 16 ನೇ ಶತಮಾನದಲ್ಲಿ ಕನಕದಾಸರು ದಾಸ ಸಾಹಿತ್ಯ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರೊ.ಎ.ಬಿ.ಒಡೆಯರ ಹೇಳಿದರು.



ಬೆಳಗಾವಿ
ರಾಯಬಾಗ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸರ 536ನೇ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಕ್ತ ಕನಕದಾಸರ ತತ್ತ್ವ ಮತ್ತು ಆದರ್ಶಗಳನ್ನು ಯುವಜನಾಂಗಕ್ಕೆ ತಿಳಿಸುವ ಕಾರಣಕ್ಕೆ ಸರಕಾರ ಜಯಂತಿ ಆಚರಿಸುತ್ತಿದೆ. ಕನಕದಾಸರು ಕವಿ, ಸಂತರಾಗಿ ದಾಸ ಸಾಹಿತ್ಯದ ಮೂಲಕ ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ‘ಕುಲ ಕುಲ ಎಂದು ಹೊಡೆದಾಡದೇ ಎಲ್ಲರೂ ಒಗ್ಗಟ್ಟಾಗಿ ಬಾಳಿರಿ’ ಎಂಬ ಏಕತೆಯ ಸಂದೇಶವನ್ನು ನೀಡಿದ್ದಾರೆಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೊ.ಕಿರಣ ಪಾಟೀಲ ವಹಿಸಿದ್ದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪಿ ಆರ್ ಸವದತ್ತಿ,ಎಮ್ ಎ ಹಂಜಿ, ಈಶ್ವರ ಪತ್ತಾರ,ಮುರಸಿದ್ದ ಕಠಾರೆ, ರಾಜು ಕಾಂಬಳೆ, ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭಾಗ್ಯಶ್ರೀ ಹಿರೇಮಠ ನಿರೂಪಿಸಿ,ಗಜರಾಜ ಮಾವಕರ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!