ಹಳ್ಳೂರ.
ಸಾವಿತ್ರಿಭಾಯಿ ಫುಲೇ ಮಹಿಳಾ ಮಂಡಳದ ವತಿಯಿಂದ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪಾ ಮಾಲಗಾರ ಅವರಿಗೆ ಸಾವಿತ್ರಿ ಬಾಯಿ ಪೂಲೆ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಬಂದವ್ವ ಕಾಗೆಯವರು ಹಾಗೂ ಸರ್ವ ಸದಸ್ಯರು ಸನ್ಮಾನ ನೇರವೇರಿಸಿ ನಂತರ ಬಂದವ್ವ ಕಾಗೆ ಮಾತನಾಡಿ ಸಹೋದರ ಮುರಿಗೆಪ್ಪಾ ಮಾಲಗಾರ ಅವರ ಸೇವೆಯಿಂದ ಮಾಳಿ ಸಮಾಜದ ಗೌರವ ಹೆಚ್ಚಾಗಿದೆ, ಇನ್ನು ಹೆಚ್ಚು ಸೇವೆ ಮಾಡುವದರೊಂದಿಗೆ ಯುವಕರಿಗೆ ಮಾದರಿಯಾಗಿ ಸಮಾಜದ ಉದ್ದಾರಕ್ಕೆ ಶ್ರಮ ಪಡಲಿ ಎಂದು ಶುಭ ಹಾರೈಸಿದರು,
ಉಪಾಧ್ಯಕ್ಷರಾದ ಕಸ್ತೂರಿ ನಿಡೋಣಿ ಮತ್ತು ಕಾರ್ಯದರ್ಶಿ ಶೃತಿ ಕುಲಿಗೊಡ.ಭಾರತಿ ನಿಡೋಣಿ.ಸಾಂವಕ್ಕ ಕೂಲಿಗೊಡ.ಶಾಂತವ್ವ ಲಕ್ಷ್ಮೇಶ್ವರ.ಮಾನಂದಾ ಅಥಣಿ.ಸಕ್ಕುಬಾಯಿ ಗೊಸಬಾಳ ಸೇರಿದಂತೆ ಸಾವಿತ್ರೀ ಬಾಯಿ ಪುಲೆ ಸರ್ವ ಸದಸ್ಯರು ಶುಭಕೋರಿ ಹಾರೈಸಿದರು.