ಇನ್ನು ಕೆಲವರು ರಾಗಿಯ ರೊಟ್ಟಿ ಮಾಡಿಕೊಂಡು ಅದನ್ನು ಬಳಸುವರು. ರಾಗಿ ದೋಸೆ ಕೂಡ ತುಂಬಾ ಜನಪ್ರಿಯವಾಗಿದೆ. ರಾಗಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಆರೋಗ್ಯ ಕಾಪಾಡಲು ತುಂಬಾ ಲಾಭಕಾರಿ..
ಅವುಗಳನ್ನು ನೋಡೋಣ :
೧. ರಾಗಿಯನ್ನು ನಾವು ನಿತ್ಯವೂ ಬಳಸಿಕೊಂಡರೆ ಅದರಿಂದ ಸಿಗುವಂತಹ ಆರೋಗ್ಯ ಲಾಭಗಳನ್ನು ಪಡೆಯಬಹುದು. ಇಂತಹ ರಾಗಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಇವೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
೨. ಕ್ಯಾಲ್ಸಿಯಂನ ಆಗರ
ಬೇರೆ ಯಾವುದೇ ಧಾನ್ಯಗಳಲ್ಲಿ ಇಲ್ಲದೆ ಇರುವಂತಹ ಕ್ಯಾಲ್ಸಿಯಂ ಅಂಶವು ರಾಗಿಯಲ್ಲಿದ್ದು, ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು. ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುವುದು.
೩. ಅಧಿಕ ನಾರಿನಾಂಶ
ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ರಾಗಿಯಲ್ಲಿ ಇರುವಂತಹ ನಾರಿನಾಂಶವು ನೆರವಾಗಲಿದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ.
ಇದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳೂ ದೂರವಾಗುವುದು. ರಾಗಿ ತಿಂದರೆ ಅದು ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಪಾಲಿಫೆನಾಲ್ ಅಂಶವು ರಾಗಿಯಲ್ಲಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು.
ದಿನಾ ರಾಗಿ ಮುದ್ದೆ ಜೊತೆ, ಹಳ್ಳಿ ಶೈಲಿಯ ಬಸ್ಸಾರು ಸೇವಿಸಿ ನೋಡಿ, ಆರೋಗ್ಯವಾಗಿರುವಿರಿ…
೪. ಅಮಿನೋ ಆಮ್ಲ
ಲೆಸಿಥಿನ್ ಮತ್ತು ಮೆಥಿಯೋನಿನ್ ಎನ್ನುವ ಅಮಿನೋ ಆಮ್ಲವು ಇದರಲ್ಲಿದ್ದು, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇದು ತಗ್ಗಿಸುವುದು ಹಾಗೂ ಯಕೃತ್ ಗೆ ಕೊಬ್ಬು ಕರಗಿಸಲು ನೆರವಾಗುವುದು. ಟ್ರೈಪ್ಟೊಫಾನ್ ಎನ್ನುವ ಮತ್ತೊಂದು ಅಮಿನೋ ಆಮ್ಲವು ಹಸಿವು ತಗ್ಗಿಸುವುದು.
೫. ಕಬ್ಬಿಣಾಂಶ ಮತ್ತು ವಿಟಮಿನ್ ಸಿ
ರಾಗಿಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆ ನಿವಾರಣೆ ಮಾಡಲು ನೆರವಾಗುವುದು ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುವುದು. ಇದರಲ್ಲಿ ನೈಸರ್ಗಿಕ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದರಿಂದ ಕಬ್ಬಿಣಾಂಶವು ಬೇಗನೆ ಹೀರಿಕೊಳ್ಳುವುದು.
೬. ಗ್ಲುಟೇನ್ ಮುಕ್ತ
ಗ್ಲುಟೇನ್ ಸೂಕ್ಷ್ಮತೆ ಇರುವವರಿಗೆ ರಾಗಿಯು ವರದಾನವಾಗಿದೆ. ಬೇರೆ ಧಾನ್ಯಗಳಲ್ಲಿ ಗ್ಲುಟೇನ್ ಅಂಶವು ಇದ್ದು, ರಾಗಿಯಲ್ಲಿ ಇದು ಶೂನ್ಯವಾಗಿದೆ.
೭. ತೂಕ ಇಳಿಕೆಗೆ ಸಹಕಾರಿ
ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿ ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇದೆ ಮತ್ತು ಒಳ್ಳೆಯ ಕೊಬ್ಬನ್ನು ಹೊಂದಿದೆ.
ತೂಕ ಇಳಿಸಿಕೊಳ್ಳಲು ಬಯಸುವವರು ರಾಗಿಯನ್ನು ಅನ್ನ ಮತ್ತು ಗೋಧಿ ಬದಲಿಗೆ ಬಳಕೆ ಮಾಡಬಹುದು. ಅಮಿನೋ ಆಂಲವು ತೂಕ ಇಳಿಸಲು ಸಹಕಾರಿ ಆಗಿದೆ.
೮. ನೈಸರ್ಗಿಕ ಖಿನ್ನತೆ ನಿವಾರಕ
ರಾಗಿಯನ್ನು ನಿತ್ಯವೂ ಬಳಕೆ ಮಾಡಿದರೆ, ಅದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆ ದೂರ ಮಾಡಬಹುದು.
ಇದರಲ್ಲಿ ಇರುವಂತಹ ಅಮಿನೋ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಕವಾಗಿ ಕೆಲಸ ಮಾಡುವುದು. ನಿಯಮಿತವಾಗಿ ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಒಳ್ಳೆಯದು.
ದೀರ್ಘಕಾಲದ ಮಾನಸಿಕ ಖಿನ್ನತೆಯ ರೋಗಲಕ್ಷಣಗಳು
೯. ಮಕ್ಕಳಿಗೆ ಪೋಷಕಾಂಶ ಒದಗಿಸುವುದು
ಬೆಳೆಯುತ್ತಿರುವಂತಹ ಮಕ್ಕಳಿಗೆ ರಾಗಿ ನೀಡಿದರೆ ಅದು ದೇಹಕ್ಕೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುವುದು.
ರಾಗಿಯು ಮಕ್ಕಳಲ್ಲಿ ತೂಕ ಹೆಚ್ಚಿಸುವುದು ಹಾಗೂ ಬೆಳವಣಿಗೆಗೆ ಸಹಕಾರಿ. ರಾಗಿಯನ್ನು ಮಕ್ಕಳಿಗೆ ನೀಡಿದರೆ ಅದರಿಂದ ಸಿಗುವ ಲಾಭಗಳು ಹಲವಾರು.
ನರ ವ್ಯವಸ್ಥೆ ಬಲಪಡಿಸುವುದು
ಟ್ರೈಪ್ಟೊಫಾನ್ ಎನ್ನುವ ಅಮಿನೋ ಆಮ್ಲವು ರಾಗಿಯಲ್ಲಿ ಅಧಿಕ ಮಟ್ಟದಲ್ಲಿದ್ದು, ಇದು ನರ ವ್ಯವಸ್ಥೆಯನ್ನು ಉತ್ತಮಪಡಿಸುವುದು, ನೆನಪಿನ ಶಕ್ತಿ ಉತ್ತೇಜಿಸುವುದು ಮತ್ತು ಮನಸ್ಸನ್ನು ಶಾಂತವಾಗಿಸುವುದು.
ರಾಗಿಯು ಆತಂಕ ಮತ್ತು ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುವುದು. ರಾಗಿಯಲ್ಲಿ ಇರುವಂತಹ ಟ್ರೈಪ್ಟೊಫಾನ್ ಅಂಶವು ನರಪ್ರೇಕ್ಷಕಗಳಲ್ಲಿ ಸೆರೊಟೊನಿನ್ ಮಟ್ಟವನ್ನು ಸಮತೋಲನಕ್ಕೆ
ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ
೧೦. ರಕ್ತಹೀನತೆ ನಿವಾರಣೆ
ರಾಗಿಯಲ್ಲಿರುವ ಕೆಲವೊಂದು ಅಂಶಗಳು ಕಬ್ಬಿನಾಂಶದ ಕೊರತೆ ನಿವಾರಿಸುವುದು. ಇದು ಕಬ್ಬಿನಾಂಶದಿಂದ ಸಮೃದ್ಧವಾಗಿರುವ ಧಾನ್ಯವಾಗಿದೆ. ಮಹಿಳೆಯರಿಗೆ ಇದು ತುಂಬಾ ಉಪಯುಕ್ತ.
೧೧. ರಕ್ತದೊತ್ತಡ ಕಡಿಮೆ ಮಾಡುವುದು
ನೀವು ಅಧಿಕ ರಕ್ತದೊತ್ತಡ ಅಥವಾ ಪರಿಧಮನಿಯ ರೋಗಗಳಿದ್ದರೆ ನಾರಿನಾಂಶವು ಅಧಿಕವಾಗಿರುವ ರಾಗಿಯು ತುಂಬಾ ಒಳ್ಳೆಯ ಆಯ್ಕೆ.
೧೨. ಮೂಳೆಯ ಆರೋಗ್ಯ ಸುಧಾರಣೆ ರಾಗಿಯಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕವಾಗಿದೆ. ನಿಯಮಿತವಾಗಿ ರಾಗಿ ಸೇವನೆ ಮಾಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು.
೧೩. ತೂಕ ಕಳೆದುಕೊಳ್ಳಲು
ಸ್ಥೂಲಕಾಯದಿಂದ ಹೊರಬರಲಿಚ್ಛಿಸುವವರಿಗೆ ರಾಗಿ ಉತ್ತಮವಾದ ಪರ್ಯಾಯ ಆಹಾರವಾಗಿದೆ. ಗೋಧಿ ಮತ್ತು ಅಕ್ಕಿಗಳೆರಡರಲ್ಲಿಯೂ ತೂಕವನ್ನು ಹೆಚ್ಚಿಸುವ ಪೋಷಕಾಂಶಗಳಿರುವುದರಿಂದ ಈ ಆಹಾರಗಳನ್ನು ಸೇವಿಸುತ್ತಿರುವಂತೆ ತೂಕ ಕಳೆದುಕೊಳ್ಳುವ ಗತಿ ಅತಿ ನಿಧಾನವಾಗುತ್ತದೆ. ಬದಲಿಗೆ ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ಶರೀರಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಜೊತೆಗೇ ಶರೀರದಲ್ಲಿ ಕ್ಯಾಲೋರಿಗಳು ನಿಧಾನವಾಗಿ ಲಭ್ಯವಾಗಿ ದಿನದ ಚಟುವಟಿಕೆ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ.
೧೪. ಪ್ರೋಟೀನ್ ಅಧಿಕವಾಗಿರುವ ಧಾನ್ಯ
ರಾಗಿಯಲ್ಲಿ ಪ್ರೋಟೀನ್ ಅಧಿಕವಾಗಿದೆ. ರಾಗಿಯಲ್ಲಿ ಇರುವಂತಹ ಅಮಿನೋ ಆಮ್ಲವು ಸ್ನಾಯುಗಳಲ್ಲಿನ ಶಕ್ತಿಯನ್ನು ಹೆಚ್ಚಿಸುವುದು.
೧೫. ವಯಸ್ಸಾಗುವ ಲಕ್ಷಣ ತಡೆಯುವುದು
ರಾಗಿಯಲ್ಲಿ ಹಲವಾರು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳಿವೆ. ಇದು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು.
೧೬. ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವುದು
ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲೂ ನೆರವಾಗುತ್ತವೆ. ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಿ ಹೊರದಬ್ಬಲು ರಾಗಿ ಅತ್ಯುತ್ತಮವಾಗಿದೆ. ಜೊತೆಗೇ ಇನ್ನಷ್ಟು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.
೧೭. ದೇಹಕ್ಕೆ ಆರಾಮ ನೀಡುವುದು
ರಾಗಿಯಿಂದ ನಿಮ್ಮ ದೇಹಕ್ಕೆ ಒಳ್ಳೆಯ ಆರಾಮ ಸಿಗುವುದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಹಿತಕಾರಿಯಾದ ಪೋಷಕಾಂಶಗಳು ಇವೆ. ಇದು ದೇಹವನ್ನು ಶಾಂತವಾಗಿಡುವುದು.
೧೮. ಹಾಲುಣಿಸುವ ಮಹಿಳೆಯ
ಮಕ್ಕಳಿಗೆ ಹಾಲುಣಿಸುವಂತಹ ಮಹಿಳೆಯರು ಹಾಲು ಉತ್ಪಾದನೆ ಹೆಚ್ಚು ಮಾಡಲು ರಾಗಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ದೀರ್ಘ ಕಾಲದ ತನಕ ಮಗುವಿಗೆ ಹಾಲುಣಿಸಲು ನೆರವಾಗುವುದು.
೧೯. ರಕ್ತಹೀನತೆಯನ್ನು ಹೋಗಲಾಡಿಸುತ್ತದೆ
ರಕ್ತಹೀನತೆಗೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಬಸಲೆ ಪಾಲಕ್ ಮೊದಲಾದ ಸೊಪ್ಪುಗಳಲ್ಲಿ ಈ ಅಂಶ ಉತ್ತಮವಾಗಿದೆ. ರಾಗಿಯಲ್ಲಿಯೂ ಉತ್ತಮ ಪ್ರಮಾಣದಲ್ಲಿ ಕಬ್ಬಿಣದ ಅಂಶವಿದೆ. ಈ ಸೊಪ್ಪುಗಳ ಸಾರಿನ ಜೊತೆಗೆ ರಾಗಿಮುದ್ದೆಯನ್ನು ಉಣ್ಣುವುದರಿಂದ ಎರಡೂ ಕಡೆಗಳಿಂದ ಉತ್ತಮ ಪ್ರಮಾಣದ ಕಬ್ಬಿಣ ಲಭ್ಯವಾಗಿ ರಕ್ತಹೀನತೆಯನ್ನು ತೊಲಗಿಸುತ್ತದೆ.
೨೦. ವಿವಿಧ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ
ದೇಹವನ್ನು ಬಾಧಿಸುವ ಅಪೌಷ್ಟಿಕತೆ, ವಯಸ್ಸಿಗೂ ಮುನ್ನವೇ ವೃದ್ದಾಪ್ಯ ಆವರಿಸುವುದು, ಅಂಗಾಂಶಗಳು ಘಾಸಿಗೊಂಡು ಹೊಸ ಅಂಗಾಂಶ ಬೆಳೆಯದೇ ದೇಹ ಸೊರಗುವುದು (ಮಧುಮೇಹದ ಒಂದು ಅಡ್ಡಪರಿಣಾಮ) ಮೊದಲಾದ ತೊಂದರೆಗಳಿಗೆ ರಾಗಿಮುದ್ದೆ ಉತ್ತಮವಾಗಿದೆ. ಹಸಿರು ರಾಗಿ (ರಾಗಿ ಹಸಿಯಿದ್ದಾಗಲೇ ಕೊಯ್ಲು ಮಾಡಿದ್ದುದು) ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ, ದುರ್ಬಲವಾಗಿದ್ದ ಹೃದಯ ಸಬಲಗೊಳ್ಳುತ್ತದೆ, ಯಕೃತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಅಸ್ತಮಾ ಮತ್ತು ಹಾಲೂಡಿಸುವ ತಾಯಂದಿರ ದೇಹದಲ್ಲಿ ಹೊಸ ಹಾಲು ಉತ್ಪಾದಿಸಲು ನೆರವಾಗುತ್ತದೆ.