ಜಂಗಮ ಸಮಾಜದ ವತಿಯಿಂದ ಮುರಿಗೆಪ್ಪಾ ಮಾಲಗಾರ ಅವರಿಗೆ ಸನ್ಮಾನ

Share the Post Now

ಹಳ್ಳೂರ

ಬಡವ ಹಿಂದುಳಿದ ವರ್ಗಗಳ ಜನಸೇವೆಯನ್ನ ಜನಾರ್ದನ ಸೇವೆ ಎಂದು ತಿಳಿದೂ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಬೇಕೆಂದು ಯಾವ ಪಲಾಪೆಕ್ಷೆವಿಲ್ಲದೇ ಜಾತಿ ಬೇಧ ಭಾವ ಮಾಡದೆ ಕಷ್ಟದಲ್ಲಿದ್ದವರ ಮನೆಗೆ ಹೋಗಿ ಪರಿಹಾರ ಹಾಗೂ ಸರಕಾರ ಸೌಲತ್ತುಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಹಸ್ರಾರು ಬಡ ಜನರ ಪ್ರೀತಿಗೆ ಪಾತ್ರರಾದ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಜಂಗಮ ಸಮಾಜದ ಮುಖಂಡರಾದ ಅಯ್ಯಪ್ಪ ಹಿರೇಮಠಹೇಳಿದರು.

ಅವರು ಗ್ರಾಮದ ಕಲ್ಮೇಶ್ವರ ದೇವಸ್ಥಾನ ಹತ್ತಿರ ಹಮ್ಮಿಕ್ಕೊಂಡ ಸನ್ಮಾನ ಕಾರ್ಯ್ರಮದಲ್ಲಿ ಮಾತನಾಡಿ ಈಗಿನ ಕಾಲದಲ್ಲಿ ಸ್ವಾರ್ಥಿಗಳೆ ಹೆಚ್ಚಾಗಿದ್ದಾರೆ ಅಂತಹದರಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ನಿರಂತರ ಸಮಾಜ ಸೇವೆ ಮಾಡಿ ಬಡ ಕುಟುಂಬದವರ ಮನೆ ಮಗನಾಗಿ ಒಂಟಿಯಾಗಿ ಹೋರಾಟ ಮಾಡುತ್ತಾ ಸಮಾಜಕ್ಕೆ ನೀಡಿದ ತಕ್ಕ ಪ್ರತೀ ಪಲಕ್ಕೆ ಇತ್ತೀಚಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ನಮ್ಮ ಗ್ರಾಮಕ್ಕೆ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು .

ಸುಭಾಸ ಅಂಗಡಿ.ಹಾಗೂ ಡಾ.ಸಂತೋಷ ಉಪಾದ್ಯೇ ಮಾತನಾಡಿ ಎಲ್ಲ ಸಮಾಜ ಬಾಂಧವರ ಜೊತೆ ಒಳ್ಳೆಯ ಒಡನಾಟವಿಟ್ಟುಕ್ಕೊಂಡು ಸಮಾಜಕ್ಕೆ ಊರಿಗೆ ಒಳ್ಳೆ ಕೆಲಸ ಕಾರ್ಯ ಮಾಡಿ ಯುವಕರ ಕಣ್ಮನೆ ಯುವನಾಯಕನಂತೆ ಇದ್ದರು ನೋಡುವರ ಕಣ್ಣಿಗೆ ಸಾದಾ ಸೀದಾ ಕಂಡರು ಯಾವ ಅಧಿಕಾರವಿಲ್ಲದಿದ್ದರು ದೊಡ್ಡವರು ಮಾಡುವ ಕೆಲಸ ತಾನು ಮಾಡಿ ಸಮಾಜದಲ್ಲಿ ಗುರುತಿಸಿಕೊಂಡ ರಣಧೀರ ಎಂದು ಹೇಳಿದರು. ಪ್ರಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರಿಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನ ನೇರವೇರಿಸಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ನೀಡಿ ಗೌರವಿಸಿದರು. ಈ ಸಮಯದಲ್ಲಿ ಮುಖಂಡರಾದ ಬಾಳಪ್ಪ ಬಾಗೋಡಿ. ಪ್ರಶಾಂತ ಮಠಪತಿ. ಸುಭಾಸ ಅಂಗಡಿ. ನಾಗಯ್ಯ ಮಠಪತಿ.ಕೆಂಪನ್ನ ಅಂಗಡಿ. ಸಿದ್ದು ತೇರದಾಳ.ಗೋವಿಂದ ಪಾಟೀಲ. ಯಾಸಿನ್ ಮುಲ್ತಾನಿ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!