ಹಳ್ಳೂರ
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಕಲರವ….* ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವುದರ ಜತೆಗೆ, ಅಳತೆ ಮತ್ತು ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ ಮತ್ತು ಲಾಭ, ನಷ್ಟಗಳ ಅರಿವು, ಸಂವಹನ ಕೌಶಲ್ಯದ ವೃದ್ಧಿ, ವಸ್ತುಗಳ ಬೆಲೆ ನಿರ್ಧಾರ ಕೌಶಲ್ಯ, ಒಂದು ಕಾರ್ಯದ ಹಿಂದಿನ ಶ್ರಮವನ್ನು ಅರ್ಥೈಸಿಕೊಳ್ಳುವುದು, ವ್ಯವಹಾರದಲ್ಲಿ ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ, ಪ್ಲಾಸ್ಟಿಕ್ ಚೀಲ ಮುಕ್ತ ಸಂತೆಗಳ ನಿರ್ವಹಣೆಯ ಬಗೆ, ಗ್ರಾಹಕ ಮತ್ತು ವ್ಯಾಪಾರಿಗಳ ನಡುವಿನ ಸಂವಹನ ಕೌಶಲ್ಯ ಮತ್ತು ಗ್ರಾಹಕರನ್ನು ಕಾಯ್ದುಕೊಳ್ಳುವ ಕಲೆಯನ್ನು ಕರಗತ ಮಾಡಿಸುವುದಲ್ಲದೇ ಮಕ್ಕಳಲ್ಲಿ ಸ್ವಾವಲಂಬಿ ಭಾವನೆಯನ್ನು ಗಟ್ಟಿಗೊಳಿಸಲು ವೇದಿಕೆಯಾಯಿತು. ಶಾಲೆಯ ಗುರುಗಳು ವಿದ್ಯಾರ್ಥಿಗಳಿದ್ದರು.