ವರದಿ: ಸಂತೋಷ ಮುಗಳಿ
ಡಿಸೆಂಬರ್ 10 ರಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ದಿ: 22ರಂದು ಮತದಾನ ಸಲ್ಲಿಸುವ ಅಂತಿಮ ದಿನ ಒಟ್ಟು 18 ಅಭ್ಯರ್ಥಿಗಳು ಉಮೇದುವಾರಿಕ ಸಲ್ಲಿಸಿದ್ದಾರೆ: ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಖಾನಗೌಡ ಹೇಳಿಕೆ;
ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ- ಆಫ್ ಕ್ರೆಡಿಟ್ ಸೊಸೈಟಿಯು ದಿ: 05.11.1996 ರಲ್ಲಿ ಸ್ಥಾಪನೆಯಾಗಿದೆ;
27 ವರ್ಷಗಳಿಂದ ಶ್ರೀ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಮತದಾನ ನಡೆಯದೇ, ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯು ನಡೆಯುತ್ತ ಬಂದಿರುತ್ತದೆ: ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಖಾನಗೌಡ;
ಸನ್.2023- 24ರ ನಂತರ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯು ಮತ್ತೆ ಅವಿರೋಧವೋ? ಅಥವಾ ಮತದಾನವೋ? ಗ್ರಾಮಸ್ಥರು ಬಕಪಕ್ಷಿಯಂತೆ ಕಾದುನೋಡುತ್ತಿದ್ದಾರೆ…!!
ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶ್ರೀಮತಿ ಸೇವಂತಿ ಹೊಸಪೇಟಿ, ಶ್ರೀಮತಿ ದೊಡ್ಡವ್ವ ಶಿರಗುಪ್ಪಿ ಹಾಗೂ (ಅ)ವರ್ಗ ಕ್ಷೇತ್ರದಿಂದ ಶ್ರೀಶೈಲ ಬಡಿಗೇರ ಇವರ ವಿರುದ್ದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಭಾಗಶಃ ಈ ಮೂರು ಅಭ್ಯರ್ಥಿಗಳು ಅವಿರೋಧ ಆದಂತೆ….. ಘೋಷಣೆ ಒಂದೇ ಬಾಕಿ….!!
ಪಾಲಬಾವಿ: ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ-ಆಪ್ ಕ್ರೇಡಿಟ್ ಸೊಸೈಟಿಯ ಸನ್.2023- 24ನೇ ಸಾಲಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ದಿ: 10ರಿಂದ ಆರಂಭಗೊಂಡಿದ್ದು ಶುಕ್ರವಾರ ದಿ: 22 ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನ ಶುಕ್ರವಾರ ಹದಿನಾಲ್ಕು ಜನ ನಾಮಪತ್ರ ಸಲ್ಲಿಸಿದರು. ಒಟ್ಟು 18 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕಿನ ಸಲ್ಲಿಸಿದ್ದಾರೆ.
ಸೋಮವಾರ ದಿ: 18ರಿಂದ ಮಂಗಳವಾರ ದಿನಾಂಕ 27ರವರೆಗೆ ಒಟ್ಟು 18 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಪರಗೌಡ ಬಾಳಗೌಡ ಪಾಟಿಲ, ಪ್ರಕಾಶ ಮಹಾಂತಪ್ಪ ಬಂದಿ, ರಾಮನಗೌಡ ಬಸನಗೌಡ ಪಾಟೀಲ, ಬನಪ್ಪ ಸಿದ್ದಲಿಂಗಪ್ಪ ತೇಲಿ, ಕೃಷ್ಣಪ್ಪ ಬಾಳಪ್ಪ ಮಂಟೂರ, ರಾಮಪ್ಪ ಮಲ್ಲಪ್ಪ ಉಳ್ಳಾಗಡ್ಡಿ, ಧರೇಪ್ಪ ಮಲ್ಲಪ್ಪ ಚಿನಗುಂಡಿ, ರಮೇಶ ಗುರುಬಸಪ್ಪ ಬಂದಿ, ಮುರಗೇಪ್ಪ ಮಹಾದೇವ ಅಂದಾನಿ ಸಾಮಾನ್ಯ ಕ್ಷೆತ್ರಕ್ಕೆ ನಾಮಪತ್ರ ಸಲ್ಲಿಸಿದ್ದು, ಶ್ರೀಮತಿ ಸೇವಂತಿ ಸುರೇಶ ಹೊಸಪೇಟಿ, ಶ್ರೀಮತಿ ದೊಡ್ಡವ್ವ ಮಾಯಪ್ಪ ಸಿರುಗುಪ್ಪಿ ಮಹಿಳಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಮುತ್ತಪ್ಪ ಹಾಲಪ್ಪ ತಳವಾರ, ಬಸಪ್ಪ ಶಿವಲಿಂಗಪ್ಪ ಘಾಟ್ಯಾಗೋಳ ಪರಿಶಿಷ್ಟ ಪಂಗಡ ವರ್ಗದಿಂದ ನಾಮಪತ್ರ ಸಲ್ಲಿಸಿದ್ದು, ಹನುಮಂತ ಭರತ ಘಂಟಿಚೋರ, ಪಾವಡಿ ಮಾರುತಿ ಘಂಟಿ ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದು, ಶ್ರೀಶೈಲ ಮಲ್ಲಪ್ಪ ಬಡಿಗೇರ (ಅ)ವರ್ಗ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಸುರೇಶ ಶಿವಲಿಂಗಪ್ಪ ಕೂಟಗಿ, ಶಿವಲಿಂಗ ದುಂಡಪ್ಪ ವಾಲಿ (ಬ) ವರ್ಗಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದು ಒಟ್ಟು 18 ಜನ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಹಾಯಕ ಚುನಾವಣಾಧಿಕಾರಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಖಾನಗೌಡ ಸುದ್ದಿಗಾರರಿಗೆ ತಿಳಿಸಿದರು.
ಹಂದಿಗುಂದ ಗ್ರಾಮದ ಶ್ರೀ ಮಹಾಲಕ್ಷ್ಮಿ ಕೋ- ಆಫ್ ಕ್ರೆಡಿಟ್ ಸೊಸೈಟಿಯು ದಿ: 05.11.1996 ರಲ್ಲಿ ಸ್ಥಾಪನೆಯಾಗಿದ್ದು ಕಳೆದ 27 ವರ್ಷಗಳಿಂದ ಶ್ರೀ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಮತದಾನ ನಡೆಯದೇ, ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರನ್ನ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸನ್.2023- 24ರ ನಂತರ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯು ಮತ್ತೆ ಅವಿರೋಧವೋ? ಅಥವಾ ಚುನಾವಣೆ ಮೂಲಕ ಮತದಾನವೋ? ಎಂದು ನಿರ್ದೇಶಕರು ಹಾಗೂ ಗ್ರಾಮಸ್ಥರು ಬಕಪಕ್ಷಿಯಂತೆ ಕಾದು ಕುಳಿತಿರುವುದಂತೂ ಅಕ್ಷರಸಹ ಸತ್ಯವಾಗಿದೆ.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀಶೈಲ ಪಾಟೀಲ, ಕುಮಾರ ಹಿರೇಮಠ, ನ್ಯಾಯವಾದಿ ಶ್ರೇಯಸ್ ಹೊಸಪೇಟಿ, ನಾಗಪ್ಪ ಅಂದಾನಿ, ರುದ್ರಪ್ಪ ಬದ್ರಶೆಟ್ಟಿ, ಶ್ರೀಶೈಲ ತೇಲಿ, ಮಹಾಲಿಂಗ ಮರನೂರ, ಶಂಕರಗೌಡ ಪಾಟೀಲ, ರಾಚಯ್ಯ ಹಿರೇಮಠ, ಮಹೇಶ ಸಬರದ, ಮಲ್ಲು ಪರಮಶೆಟ್ಟಿ, ಸಿದ್ದಗೌಡ ಪಾಟೀಲ, ದುಂಡಪ್ಪ ಚಿಲ್ಲಾಳಶೆಟ್ಟಿ, ಸತೀಶ ಚಿನಗುಂಡಿ, ಮಲಗೌಡ ಪಾಟೀಲ, ರೇಣುಕಾ ಪರಮಶೆಟ್ಟಿ, ಕವಿತಾ ಬಂದಿ, ಕವಿತಾ ಅಂದಾನಿ, ದ್ರಾಕ್ಷಾಯಿಣಿ ಅಂದಾನಿ, ದ್ರಾಕ್ಷಾಯಿಣಿ ನಾವಿ, ಪರಪ್ಪ ಚಿಂಚಲಿ, ಸದಾಶಿವ ಚಿನಗುಂಡಿ, ಸಂಗಪ್ಪ ಬಿಸಗುಪ್ಪಿ, ಪರಪ್ಪ ಬದ್ರಶೆಟ್ಟಿ, ಗಿರಿಮಲ್ಲಪ್ಪ ಚಿಂಚಲಿ, ಸಿದ್ದಲಿಂಗಪ್ಪ ಖಾನಗೌಡ, ಮಲ್ಲಪ್ಪ ಚೌಗಲಾ, ಶ್ರೀಕಾಂತ ಬಡಿಗೇರ, ಮಲ್ಲಪ್ಪ ಮಿರ್ಜಿ ಇತರರು ಇದ್ದರು.