ಮಹಿಳೆಯರ ಶಿಕ್ಷಣಕ್ಕಾಗಿ ತಮ್ಮ ಜೀವನವೇ ಮುಡಿಪಾಗಿಟ್ಟು ಮಹಾತಾಯಿ :ಸಾವಿತ್ರಿ ಬಾಯಿಪುಲೆ

Share the Post Now

ಮುಗಳಖೋಡ .

ತನ್ನ ಜೀವನವನ್ನೆ ಸಮಾಜಕ್ಕಾಗಿ ಮುಡಿಪಾಗಿಟ್ಟು ಹಿಂದುಳಿದ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಿದ ಮಹಾತಾಯಿ ಸಾವಿತ್ರಿ ಬಾಯಿ ಪುಲೆಯವರು.

ತನ್ನ ಕೆಲಸ ಕಾರ್ಯ ಮಾಡುತ್ತಾ ಸಮಾಜ ಸೇವೆ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಜಿಲ್ಲಾ ರಾಜ್ಯೋತ್ಸವ ಹಾಗೂ ಆಪತಬಾಂಧವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು ಎಂದು ಪ್ರಧಾನ ಗುರುಗಳಾದ ನಾಗಪ್ಪ ಅರಬಾಂವಿ ಹೇಳಿದರು.

ಪಟ್ಟಣದ ನೀರಲಖೋಡಿ ತೋಟದ ಶ್ರೀ ಸಿದ್ದರಾಮೇಶ್ವರ ಅನುದಾನಿತ ಕನ್ನಡ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿ ಬಾಯಿ ಪುಲೆಯವರ ಜಯಂತ್ಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಹಗಲಿರುಳು ಎನ್ನದೆ ರಾಯಬಾಗ,ಮೂಡಲಗಿ, ಗೋಕಾಕ ತಾಲೂಕಿನ ಬಡವರ ಮನೆ ಬಾಗಿಲಿಗೆ ಸರಕಾರಿ ಯೋಜನೆಗಳನ್ನು ತಲುಪಿಸಿ ಯಾವುದೆ ಪಲಾಪೇಕ್ಷೆವಿಲ್ಲದೇ ಮಾನವೀಯತೆ ಮೆರೆದು ಅನೇಕ ಪ್ರಶಸ್ತಿ ಪಡೆದು ನೂರಾರು ಸನ್ಮಾನ ಸ್ವೀಕರಿಸಿದ ಮುರಿಗೆಪ್ಪ ಮಾಲಗಾರ ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು.

ಮುರಿಗೆಪ್ಪ ಮಾಲಗಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ನನಗೆ ಪ್ರಶಸ್ತಿ ಸನ್ಮಾನಗಳಿಂದ ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಕಾರ್ಯ ಮಾಡಿ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಬೇಕೆನ್ನುವ ಒಳ್ಳೆಯ ಮನೋಭಾವ ನನ್ನಲ್ಲಿದೆ ಎಂದು ಹೇಳಿದರು. ಶಿಕ್ಷಕ ಶ್ರೀಶೈಲ ಕೂಲಿಗೊಡ ಮಾತನಾಡಿ ಮುರಿಗೆಪ್ಪ ಮಾಲಗಾರ ಅವರ ಬಾಲ್ಯದಿಂದ ಹಿಡಿದು ಈಗಿನವರಿಗೆ ಪ್ರಾಮಾಣಿಕ ಪತ್ರಕರ್ತ, ಹಾಗೂ ಸಮಾಜ ಸೇವೆ ಮಾಡಿ ಪ್ರಾಮಾಣಿಕವಾಗಿ ನಡೆದೂ ಬಂದ ಜೀವನ ಚರಿತ್ರೆ ಬಗ್ಗೆ ಹಾಗೂ ಸಾವಿತ್ರಿ ಬಾಯಿ ಪುಲೆ ತತ್ವ ಸಿದ್ಧಾಂತಗಳ ಬಗ್ಗೆ ಹೇಳಿದರು.

ಪ್ರಾರಂಭದಲ್ಲಿ ಸಾವಿತ್ರಿ ಬಾಯಿ ಪುಲೆ ಅವರ ಭಾವ ಚಿತ್ರಕ್ಕೆ ಉಪಾ ದ್ಯಕ್ಷರಾದ ಜಿ ಎಂ ಕುಲಿಗೊಡ.ಕಾರ್ಯದರ್ಶಿ ಆರ್ ಎಂ ಕೂಲಿಗೊಡ ಅವರು ಪೂಜೆ ನೆರವೇರಿಸಿದರು ಈ ಸಮಯದಲ್ಲಿ ಎಂ ಎಂ ಹಿರೇಮಠ. ಎಸ್ ಎಸ್ ಕೂಲಿಗೊಡ. ಯು ವಾಯ್ ತಲವಾರ. ಕೆ ಎಂ ಬೆಕ್ಕೆರಿ ಸೇರಿದಂತ ವಿದ್ಯಾರ್ಥಿಗಳಿದ್ದರು. ಕಾರ್ಯಕ್ರಮವನ್ನು ಎನ್ ಬಿ ಅರಬಾವಿ ಸ್ವಾಗತಿಸಿ.ಗಿರೀಶ ತಳವಾರ ನಿರೂಪಿಸಿ. ಎನ್ ಎಸ್ ಕಾಂಬಳೆ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!