ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ವಿಕಸಿತ ಭಾರತ ನಮ್ಮ ಸಂಕಲ್ಪ ಯೋಜನೆ ಹೊತ್ತ ವಾಹನದ ಎಲ್.ಇ.ಡಿ ಮೂಲಕ ಜನಜಾಗೃತಿ ಮೂಡಿಸಿದರು.
ಪಟ್ಟಣದ ಚಿಂಚಲಿ ವೃತ್ತದಲ್ಲಿ, ಶ್ರೀರೇಣುಕಾದೇವಿ ಇಂಡಿಯನ್ ಗ್ರಾಮೀಣ ವಿತರಕ, ಕೆನರಾ ಬ್ಯಾಂಕ್, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ವತಿಯಿಂದ ಬರಮಾಡಿಕೊಂಡು ಸಾರ್ವಜನಿಕರಿಗೆ ವಿಕಸಿತ ಸಂಕಲ್ಪ ಭಾರತ ಯೋಜನೆ ಮಾಹಿತಿ ಎಲ್.ಇ.ಡಿ ಮೂಲಕ ಪ್ರದರ್ಶನ ಮಾಡಿದರು.
ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಶೇಖರ ದಳವಾಯಿ ವಿವಿಧ ಇಲಾಖೆಗಳ, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರಿಗೆ ವಿಕಸಿತ ಸಂಕಲ್ಪ ಭಾರತದ ಪ್ರಮಾಣ ಭೋದಿಸಿದರು.
ನಂತರ ಇಂಡೇನ ಗ್ಯಾಸ್ ವಿತರಕ ಯಲ್ಲಪ್ಪ ವಡ್ಡರ ಮಾತನಾಡಿ ಹಲವು ದಶಕಗಳಿಂದ ಹೊಗೆಯಿಂದ ಸಮಸ್ಯೆಯನ್ನು ಎದುರಿಸುತಿದ್ದ ದೇಶದ 2.5ಲಕ್ಷ ಗ್ರಾಮಗಳು, 3600ಕ್ಕೂ ಹೆಚ್ಚು ಪಟ್ಟಣ ನಗರಗಳ
ಬಡ ಕುಟುಂಬದ ಮಹಿಳೆಯರಿಗೆ ಹೊಗೆ ಮುಕ್ತ ಮನೆ, ಹೊಗೆ ಮುಕ್ತ ಭಾರತ ಸಂಕಲ್ಪದೊಂದಿಗೆ 2016ರಲ್ಲಿ ಪ್ರಾರಂಭವಾದ ಉಜ್ವಲ ಯೋಜನೆ ಹೊಗೆಯಿಂದ ಅನಾರೋಗ್ಯ ಜೀವನ ಎದುರಿಸುತಿದ್ದ ಮಾತೆಯರ ಜೀವನವನ್ನು ಪಾವನಗೊಳಿದ್ದು, ಸುಕನ್ಯಾ ಸಮೃದ್ಧಿ ಯೋಜನೆ,ಮುದ್ರಾ, ಆತ್ಮನಿರ್ಭರ ಭಾರತ, ಆಯುಷ್ಮಾನ ಭಾರತ, ಮಾತೃಪೂರ್ಣ ಯೋಜನೆ, ಹತ್ತು ಹಲವು ದೇಶ ವಿಶ್ವದಲ್ಲಿ ಬಹು ಎತ್ತರಕ್ಕೇರಿಸಿದೆ ಎಂದರು.
ಈ ಸಂದರ್ಭದಲ್ಲಿ ಅನಿಲ ಪಾಟೀಲ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ಪುರಸಭೆ ಸಿಬ್ಬಂದಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.