ಬಬಲೇಶ್ವರ .
ಸಮೀಪದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ಪರಮಾನಂದ ಯೋಗಾಶ್ರಮದಲ್ಲಿ ನಡೆದ 18 ನೇ ವಿಶ್ವತತ್ತ್ವ ಜ್ಞಾನ ಪರಿಷತ್ ಕಾರ್ಯಕ್ರಮವು ಬೀದರ ಶ್ರೀ ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಅವರ ಅಮೃತ ಹಸ್ತದಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಬಡವರ ಬಂಧು ದಿನ ದಯಾಳು ನಿರಂತರ ಸಮಾಜ ಸೇವೆ ಮಾಡುತ್ತಿರುವ ಮುರಿಗೆಪ್ಪ ಬಸಪ್ಪ ಮಾಲಗಾರ ಅವರಿಗೆ ಆಪದ್ಭಾಂದವ ಎಂಬ ಪ್ರಶಸ್ತಿ ಯನ್ನು ಪ್ರಧಾನ ಮಾಡಿ ಶುಭ ಹಾರೈಸಿದರು.ಈ ಸಮಯದಲ್ಲಿ ನಾಗರಾಳ ಶ್ರೀ ಸಿದ್ದಾರೂಢ ಮಠ ಪರಮಾನಂದ ಯೋಗಾಶ್ರಮದ ಪಿಠಾದ್ಯಕ್ಷರಾದ ಶ್ರೋ ಬ್ರ ಜ್ಞಾನೇಶ್ವರ ಮಹಾಸ್ವಾಮಿಗಳು. ಶ್ರೀ ಮಲ್ಲಿಕಾರ್ಜುನ ಶಾಸ್ತ್ರಿಗಳು. ಅನಂತಾನಂದ ಶರಣರು. ಮಾತೋಶ್ರೀ ಅಕ್ಕಮಹಾದೇವಿಯವರು. ಕೊಂಡಿಭಾ ಸಂತರು.ಸ್ವರೂಪಾನಂದ ಮಹಾಸ್ವಾಮಿಗಳು. ಶಂಕರಾನಂದ ಮಹಾಸ್ವಾಮಿಗಳು. ಧರ್ಮದರ್ಶಿಗಳಾದ ಜೆ ಬಿ ರೇವತಗಾಂವ ಸೇರಿದಂತೆ ಅನೇಕರಿದ್ದರು.