ಬೆಳಗಾವಿ.
ಮುಗಳಖೋಡ: ದಿನಾಂಕ 10/01/2024 ರಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಬೆಳಗಾವಿ , ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಬಾಗ ಮತ್ತು ಪಟ್ಟಣದಲ ಸಮುದಾಯ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ತಾಯಿಯಿಂದ ಮಕ್ಕಳಿಗೆ ಹೆಚ್ ಐ ವಿ ಸಿಫಿಲಿಸ್ ಮತ್ತು ಹೆಪಟೈಟಿಸ್ ಹರಡುವಿಕೆಯ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು.
ಪ್ರಾರ್ಥನೆ ಮತ್ತು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ನಂತರ 40 ಜನ ಗರ್ಭಿಣಿ ಮಹಿಳೆಯರ ಉಡಿತುಂಬುವ ಮೂಲಕ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡಿದರು.
ನಂತರ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಮೋನಿಕಾ ಮಾಲಿಪಾಟೀಲ ಅವರು ಹೆಚ್ ಐ ವಿ ಸಿಫಿಲಿಸ್ ಮತ್ತು ಹೆಪಟೈಟಿಸ್ ಹರಡುವಿಕೆ ಪೌಷ್ಠಕ ಆಹಾರವನ್ನು ಹೇಗೆ ಯಾವ ಯಾವ ಸಮಯದಲ್ಲಿ ಸೇವನೆ ಮಾಡಬೇಕು ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯದ ಕಾಳಜಿ ಬಗ್ಗೆ ವಿವರವಾಗಿ ತಿಳಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಮೆಲಾಪೂರೆ ಮುಖ್ಯ ಅತಿಥಿ ಡಾ. ವಿಶಾಲಾಕ್ಷಿ .ಕೆ ಚಿಕ್ಕ ಮಕ್ಕಳ ತಜ್ಞರು , ಡಾ ಧನಶ್ರೀ ಜಾಧವ ದಂತ ವೈದ್ಯಾಧಿಕಾರಿಗಳು ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಹೆಚ್ ಐ ವಿ ಹರಡುವ ಬಗ್ಗೆ , ಸೋಕಿಂತರಿಗಿರುವ ಎ ಆರ್ ಟಿ ಚಿಕಿತ್ಸೆ ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ಐ ಸಿ ಟಿ ಸಿ ಆಪ್ತಸಮಾಲೋಕರಾದ ಮಹೇಶ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಲತಾ ಪಾಟೀಲ ಕಛೇರಿ ಅಧಿಕ್ಷಕರು , ಅಮೃತ ದಳವಿ , ಮಾಯಾ ಗೌಡರ , ಸರಸ್ವತಿ ಕುಂಬಾರ , ವಿಜಯಲಕ್ಷ್ಮೀ ಕಬಾಡೆ, ಶ್ರೀದೇವಿ ಪಾಟೀಲ ,ಕಸ್ತೂರಿ ದೇವರಮನಿ , ಜ್ಯೋತಿ ಡಂಗ , ಸಿ ಎಚ್ ಓ ಸಾಬನಾ ಶಕ್ತಿ ಮಹಿಳಾ ಏಡ್ಸ್ ನಿಯಂತ್ರಣ ಸಂಘದ ಮಹಾತೇಂಶ , ಅಮಿತಾ, ಆಶಾ ಕಾರ್ಯಕರ್ತೆಯರು ಹಾಗೂ ಸಂಘದ ಸದಸ್ಯರು ಭಾಗಿಯಾಗಿದ್ದರು.
ಮಲ್ಲಪ್ಪ ಬೆಳವಿ ಸ್ವಾಗತಿಸಿದರು ಶ್ರೀಮತಿ ಭಾರತಿ ಹೊಟ್ಟಿ ವಂದಿಸಿದರು. , ಮಹೇಶ ಪಾಟೀಲ ನಿರೂಪಿಸಿದರು.
ವರದಿ: ಸಂತೋಷ ಮುಗಳಿ