ಹಳ್ಳೂರ .
ಕಷ್ಟದಲ್ಲಿ ಜೀವನ ಸಾಗಿಸುವ ಬಡ ಜನರಿಗೆ ಸಹಾಯ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿ ಜಾತಿ ಬೇಧ ಭಾವ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆವಿಟ್ಟು ಪ್ರೀತಿ ತೋರುತ್ತಾ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಾ ಬೇಸರ ಪಡದೆ ನಿರಂತರ ಸಮಾಜ ಸೇವೆ ಮಾಡುತ್ತಿರುವ ಹೆಮ್ಮೆಯ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆ ಶ್ಲಾಘನೀಯವಾಗಿದೆ ಎಂದು ಅಪ್ಪು ಸಿದ್ದಾಪೂರ ಹೇಳಿದರು.
ಅವರು ಗ್ರಾಮದ ಶ್ರೀ ಮಹಾಲಕ್ಷ್ಮೀ ಆಯಿಲ್ ಮಿಲ್ ಹಾಗೂ ವಾಟರ್ ಸರ್ವಿಸ್ ಅಂಗಡಿಯಲ್ಲಿ ಇತ್ತೀಚಿಗೆ ನೀಡಿದ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಆಪದ್ಭಾಂದವ ಪ್ರಶಸ್ತಿ ಪಡೆದ ಮುರಿಗೆಪ್ಪ ಮಾಲಗಾರ ಅವರ ಸನ್ಮಾನ ಕಾರ್ಯಕ್ರಮಲ್ಲಿ ಮಾತನಾಡಿ ಬಡವ ದಿನ ದಲಿತರ ಕೆಲಸ ಕಾರ್ಯ ಮಾಡಿ ಕಷ್ಟಕ್ಕೆ ಸ್ಪಂದನೆ ನೀಡಿ ಸಹಸ್ರಾರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆಂದು ಹೇಳಿದರು. ಬಸು ನಿಡೋಣಿ ಮಾತನಾಡಿ ಸಮಾಜದಲ್ಲಿ ಸಾಕಷ್ಟು ಜನ ಹೆಸರು ಗಳಿಸಲಿಕ್ಕೆ ಸಾಕಷ್ಟು ಹಣ ಕರ್ಚು ಮಾಡುತ್ತಾರೆ ಆದರೆ ಸಮಾಜದ ಹಿತ ಕಾರ್ಯಗಳನ್ನು ತಮ್ಮ ಕೆಲಸ ಕಾರ್ಯಗಳ ಮದ್ಯೆ ಬಿಡುವಿಲ್ಲದೆ ಸಮಾಜ ಸೇವೆ ಮಾಡಿ ಯಾವ ಅದಿಕಾರ ಇಲ್ಲದೇ ಯಾವುದಕ್ಕೂ ಆಸೆ ಪಡದೇ ಚಿಕ್ಕ ವಯಸ್ಸಿನಲ್ಲಿಯೇ ರಾಜ್ಯ ಮಟ್ಟದಲ್ಲಿಯೇ ಗುರುತಿಸಿಕೊಂಡ ಮುರಿಗೆಪ್ಪ ಮಾಲಗಾರ ಅವರ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಮುರಿಗೆಪ್ಪ ಮಾಲಗಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಊಹಿಸಲಾಗದಷ್ಟು ನನಗೆ ಸನ್ಮಾನ ಮಾಡಿದ ಮಹನೀಯರಿಗೆ ಸದಾಕಾಲ ಚಿರ ಋಣಿಯಾಗಿರುತ್ತೇನೆ. ಇನ್ನು ಹೆಚ್ಚಾಗಿ ಸಮಾಜ ಕೆಲಸ ಮಾಡಲು ದೇವರ ಆಶಿರ್ವಾದ ನಿಮ್ಮೆಲ್ಲರ ಸಹಾಯ ಸಹಕಾರ ಸದಾಕಾಲ ಇರಲೆಂದು ಹೇಳಿದರು. ಮಲ್ಲಪ್ಪ ಕೋಟಿನತೋಟ ಮಾತನಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಆಪದ್ಬಾoದವ ಪ್ರಶಸ್ತಿ ಪಡೆದು ಗ್ರಾಮಕ್ಕೆ ಹಾಗೂ ನಮ್ಮ ಸಮಾಜಕ್ಕೆ ಕೀರ್ತಿ ತಂದು ಕೊಟ್ಟವರು ಪ್ರಥಮವಾಗಿ ಮುರಿಗೆಪ್ಪ ಮಾಲಗಾರ ಅವರು ಎಂದು ಹೇಳಿದರು.
ಪ್ರಾರಂಬದಲ್ಲಿ ಸನ್ಮಾನ ನೇರವೇರಿಸಿ ಅಪ್ಪುವಿನ ಭಾವಚಿತ್ರವನ್ನು ನೀಡಿ ಗೌರವಿಸಿದರು. ಈ ಸಮಯದಲ್ಲಿ ಇಂಜಿನಿಯರ ಮಲ್ಲಪ್ಪ ಗೊಸಬಾಳ. ಯುವ ನಾಯಕ ಗಜಾನನ ಡಬ್ಬನವರ. ಮಲ್ಲಯ್ಯ ಮಠಪತಿ.ಪುಂಡಲಿಕ ಪೂಜೇರಿ.ಬಸವರಾಜ ತಳವಾರ.ಶಿವು ಬೆಂಡವಾಡ. ಸುರೇಶ ಲಕ್ಷ್ಮೇಶ್ವರ. ಶಿವು ಬಡಿಗೇರ.ನಿಂಗಪ್ಪ ಸಿದ್ನಾಳೆ. ಪ್ರಶಾಂತ ಜಗತಾಪ. ಜ್ಯೋತಿಬಾ ಮೋರೆ. ಸೇರಿದಂತೆ ಅನೇಕರಿದ್ದರು.