ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ 2024 ಗೆ ಸಿದ್ಧತೆ ಕ್ಷಣಗನಣೆ.

Share the Post Now

ಬೆಳಗಾವಿ: ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಯೋಜಿಸುತ್ತಿರುವ “ಬೆಳಗಾವಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ”-2024 ಜನವರಿ 20 ರಿಂದ 23 ರವರೆಗೆ ಬೆಳಗಾವಿಯ ಶ್ರೀ ಬಿ. ಎಸ್. ಯಡಿಯೂರಪ್ಪ ಮಾರ್ಗದಲ್ಲಿ ಜರುಗಲಿದೆ.

ಈ ಉತ್ಸವಕ್ಕೆ ಅಂತರಾಷ್ಟ್ರೀಯ ಖ್ಯಾತಿಯ 10 ಜನ ವಿದೇಶಿಯರು ಹಾಗೂ 32 ಜನ ಭಾರತದ ವಿವಿಧ ರಾಜ್ಯಗಳಿಂದ ಗಾಳಿಪಟ ಹಾರಿಸುವ ಪರಿಣಿತರು ಆಗಮಿಸಲಿದ್ದಾರೆ.

ಈ ಬಾರಿಯೂ ಯುವಕರಿಗಾಗಿ ಉಮಂಗ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಭಾಷಣ, ವಾದವಿವಾದ, ಸೋಲೊ ನೃತ್ಯ, ಗುಂಪು ನೃತ್ಯ, ಸೋಲೊ ಗಾಯನ, ಮೋಕ್ ಪ್ರೇಸ್, ಹಾಗೂ ಫ್ಯಾಷನ್ ಶೋ ಸ್ಪರ್ಧೆಗಳು ಆಯೋಜಿಸಲಾಗಿದೆ.

ಈ ಬಾರಿಯು ಕಾಲೇಜು ವಿದ್ಯಾಥಿಗಳಿಗಾಗಿ ಡಿಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯು ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿದೆ ಹಾಗೂ ಕಾರ್ಯಕ್ರಮದ ದಿನದಂದು ಶ್ರೀರಾಮ ಮಂದಿರ ಪ್ರಾಣಪ್ರತಿಷ್ಟಾ ನಿಮಿತ್ಯ ಭವ್ಯ ಕ್ಯಾಕರ್ ಶೂ ಆಯೋಜಿಸಲಾಗಿದೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಬಲೂನ್ ಉತ್ಸವ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಚಿಕ್ಕ ಮಕ್ಕಳಿಗಾಗಿ ಗುಂಪು ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸದರಿ ಉತ್ಸವಕ್ಕೆ ನಗರದ 11 ಶಾಲೆಗಳಿಂದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಉತ್ಸವದ ವೇಳಾಪಟ್ಟಿ ಹಾಗೂ ಗಾಳಿಪಟ ಹಾರಿಸುವ ಪರಿಣತರ ವಿವರವನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.

ಈ ಉತ್ಸವವು ಬೆಳಗಾವಿ ವಾಣಿಜ್ಯೋದ್ಯಮ ಹಾಗೂ ಪ್ರವಾಸೊದ್ಯಮಕ್ಕೆ ಅಂತರಾಷ್ಟ್ರೀಯ ಖ್ಯಾತಿ ಪಡೆಯಲು ಸಹಕಾರಿಯಾಗಿದೆ. ಅಲ್ಲದೇ ಯುವ ಸಮೂಹ ಹಾಗೂ ಮಕ್ಕಳು ತಮ್ಮ ಕಲೆ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

Leave a Comment

Your email address will not be published. Required fields are marked *

error: Content is protected !!