ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಭೋಜನ ಸವಿದರು.
ಸೋಮವಾರ ಸುಟ್ಟಟ್ಟಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಶಿಕ್ಷಕ ಸಿಬಂದಿದವರ ಜೊತೆ ಮಕ್ಕಳ ಜೊತೆ ಸಂವಾದ ನಡೆಸಿದರು.
ನಂತರ ಮಕ್ಕಳೊಂದಿಗೆ ಭೋಜನ ಸವಿದರು.
ಈ ಸಂದರ್ಭದಲ್ಲಿ ಮುರಾರಿ ಬಾನೆ, ವಾಮನ ಹಟ್ಟಿಮನಿ, ಶ್ರವಣ ಕಾಂಬಳೆ, ಶಾಲಾ ಸಿಬ್ಬಂದಿ, ಕಾರ್ಯಕರ್ತರು ಉಪಸ್ಥಿತರಿದ್ದರು.