ಹಳ್ಳೂರ .ಗ್ರಾಮದ ವಿವಿಧ ಕಡೆ 75 ನೇ ಗಣರಾಜ್ಯೋತ್ಸವ ಆಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಿದರು. ಗ್ರಾಮ ಪಂಚಾಯಿತಿ, ಗ್ರಾಮ ಆಡಳಿತ ಕಛೇರಿ, ಬಿ ಕೆ ಎಂ ಪ್ರೌಡ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವವಶಂಕರ ನಗರ ಶಾಲೆ, ಪಶು ಆಸ್ಪತ್ರೆ, ನ್ಯಾಯ ಬೆಲೆ ಅಂಗಡಿ, ಅಂಬೇಡ್ಕರ್ ಭವನ,ಬ್ಯಾಂಕ , ಸಂಘ ಸಂಸ್ಥೆಗಳಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ದ್ವಜಾರೋಹಣವನ್ನು ಅಧ್ಯಕ್ಷೆ ನೀಲವ್ವ ಹೊಸಟ್ಟಿ. ಗ್ರಾಮ ಆಡಳಿತ ಕಛೇರಿಯಲ್ಲಿ ಸಂಜು ಅಗ್ನೆಪ್ಪಗೋಳ. ಪಶು ಆಸ್ಪತ್ರೆಯಲ್ಲಿ ಡಾ ವಿಶ್ವನಾಥ ಹುಕ್ಕೇರಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಏಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ ಸಿದ್ದಾಪೂರ. ಬಿ ಕೆ ಎಂ ಪ್ರೌಡ ಶಾಲೆ ಉಪಾಧ್ಯಕ್ಷ ಸುರೇಶ ಮಗ ದುಮ. ಪಾವಡೆಪ್ಪ ಪುಜೇರಿ. ಕುರುಬ ಸಮಾಜದ ಭವನದಲ್ಲಿ ಸತ್ತೆಪ್ಪ ಮರಿಚಂಡಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯಲ್ಲಿ ಅಧ್ಯಕ್ಷ ಸುರೇಶ ಕತ್ತಿ ಅವರು ದ್ವಜಾರೋಹಣವನ್ನು ನೇರವೇರಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ, ಉಪಾಧ್ಯಕ್ಷ , ಹಾಗು ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಪ್ರಧಾನ ಗುರುಗಳಾದ ಶಿವಾನಂದ ವಾಸನ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಮಯದಲ್ಲಿ ಪ್ರಮುಖರು ಸಾರ್ವನಿಕರು ಶಾಲೆಯ ವಿದ್ಯಾರ್ಥಿಗಳಿದ್ದರು.





