ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಶಾಲೆಯ ಸಹ ಶಿಕ್ಷಕರಾದ ರಾಜು ಜಮಾದಾರ ಅವರಿಗೆ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಪಟ್ಟಣದ ಜುನ್ನೇದಿಯಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಜು ಕುತುಬುದ್ದೀನ ಜಮಾದಾರ ಇವರು ಶಿಕ್ಷಣದ ಜೊತೆಗೆ ಮಾಡಿದ ಸಮಾಜ ಸೇವೆಯನ್ನು ಪರಿಗಣಿಸಿ ಅವರಿಗೆ ರವಿವಾರ ತಮಿಳುನಾಡು ಪಾಂಡಿಚೇರಿಯ ಲೇ ಮಾರಿಡಿಯನ ಭವ್ಯ ಹೊಟೇಲಿನಲ್ಲಿ ಜರುಗಿದ ಸೌತವೇಸ್ಟರ್ನ ಅಮೇರಿಕನ್ ಯುನಿವರ್ಸಿಟಿಯವರು ಹಾನರರಿ ಡಾಕ್ಟರ ಘಟಿಕೋತ್ಸವದಲ್ಲಿ ತಮಿಳುನಾಡಿನ ಗಣ್ಯ ವ್ಯಕ್ತಿಗಳು, ಚಲನಚಿತ್ರ ನಿರ್ಮಾಪಕರು, ಪಾಂಡಿಚೇರಿಯ ಮುಖ್ಯ ನ್ಯಾಯಾಧೀಶರು ರಾಜು ಜಮಾದಾರ ಅವರಿಗೆ ಗೌರವ ಡಾಕ್ಟರೇಟ್ ಆಫ್ ಸೋಷಿಯಲ್ ವರ್ಕ್ ಅವಾರ್ಡ್ ನೀಡಿ ಗೌರವಿಸಿದರು.