ಹಳ್ಳೂರ . ಸರಕಾರದ ಆದೇಶ ಮೇರೆಗೆ ಸಂವಿಧಾನ ಪೀಠಿಕೆ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಯ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿದಾನ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ಸರಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿದಾನ ಜಾಥಾ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಅದರಂತೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಪಂಚಾಯಿತಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಹಳ್ಳೂರ ಗ್ರಾಮಕ್ಕೆ ಸಂವಿದಾನ ಜಾಗೃತಿ ಜಾಥಾ ಸ್ತಬ್ದ ಚಿತ್ರವನ್ನು ಅತ್ಯಂತ ವಿಜೃಂಭಣೆಯಿಂದ ಆದ್ದೂರಿಯಾಗಿ ಸ್ವಾಗತ ಮಾಡಿಕೊಂಡ ಸಂವಿದಾನ ಪೀಠಿಕೆ ಓದಿ ಕಾರ್ಯಕ್ರಮ ನೆರವೇರಿಸಲಾಯಿತು.
ಸಂವಿದಾನ ಶಿಲ್ಪಿ ಡಾ ಬಾಭಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಹೊಸಟ್ಟಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಣ್ಣ ಗುಜನಟ್ಟಿ.
ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೋಳ ಪೂಜೆಯನ್ನು ನೆರವೇರಿಸಿದರು. ಈ ಸಮಯದಲ್ಲಿ ತಾಲೂಕಾ ಬಿಸಿ ಊಟ ಅಧಿಕಾರಿ ಎ ಬಿ ಮಲಬಣ್ಣವರ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಗುಡದರಿ.ಪ್ರಶಾಂತ ಕರಿಗಾರ. ಅರುಣ ನುಚ್ಚುಂಡಿ.ಕುಮಾರ ಲೋಕನ್ನವರ. ಮು,ಎಂ ಏನ್ ಕುಲಕರ್ಣಿ.ಪ್ರ ಗು,ಎಸ್ ಎಚ್ ವಾಸನ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಗೋವಿಂದ ಮಾದರ.ಆರ ಎಂ ತೆಲಸಂಗ. ಪರಮಾನಂದ ಶೇಡಬಾಳ್ಕರ.ಸೇರಿದಂತೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಿ ಕೆ ಎಂ ಪ್ರೌಡ ಶಾಲೆ ವಿದ್ಯಾರ್ಥಿಗಳು ಶಿಕ್ಷಕ, ಶಿಕ್ಷಕಿಯರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಗುರು ಹಿರಿಯರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳಿದ್ದರು.