ಹಳ್ಳೂರ . ಗ್ರಾಮದ ಸ್ವತಂತ್ರ ಹೋರಾಟಗಾರರು ಶ್ರೀ ಗೀರಿಮಲ್ಲೇಶ್ವರ ಮಹಾರಾಜರ ಶಿಷ್ಯರಾದ ಮಲ್ಲಪ್ಪಾ ಹೊಸಮನಿ ಮಹಾರಾಜರ ಸಪ್ತಾಹ ಕಾರ್ಯಕ್ರಮವು ಶನಿವಾರದಂದು ಗ್ರಾಮದ ತೋಟದಲ್ಲಿ ಜರುಗುವ ಸಪ್ತಾಹ ಕಾರ್ಯಕ್ರಮಕ್ಕೆ ಇಂಚಗೇರಿ ಮಠದ ಶ್ರೀ ರೇವಸಿದ್ದೇಶ್ವರ ಮಹಾರಾಜರಿಂದ ಮುಂಜಾನೆ ದಾಸಭೋದ ವೀಣಾ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುವುದು.
ಮಧ್ಯಾಹ್ನ ವಿಮಲ ಬ್ರಹ್ಮ ನಿರೂಪಣೆ ಯೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುವುದು. ರಾಮಣ್ಣ ಮಹಾರಾಜರು. ಶ್ರೀ ನಾಮದೇವ ಸಂತರು. ಶ್ರೀಮಂತ ಮಹಾರಾಜರು. ವಸಂತ ಮಹಾರಾಜರು. ಕೆಂಚಪ್ಪ ಮಹಾರಾಜರು. ಇನ್ನೂ ಅನೇಕ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗುವುದು. ಈ ಸಮಯದಲ್ಲಿ ಹುಬ್ಬಳ್ಳಿಯಿಂದ ಇಂಚಗೆರಿಗೆ ಹೊರಡುವ ಪಾದಯಾತ್ರೆ ಆಗಮಿಸುವುದು. ಸರ್ವರೂ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ಲಕ್ಷ್ಮಣ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





