ಸದ್ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆಯಿರಿ:ವಸಂತ ಮಹಾರಾಜರು

Share the Post Now

ಹಳ್ಳೂರ . ಸಮರ್ಥ ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದು ಸನ್ಮಾರ್ಗದಲ್ಲಿ ಸಾಗಿ ಸತ್ಯದ ಕಾಯಕ ಮಾಡುತ್ತಾ ಪ್ರಪಂಚ ಜೊತೆ ಪಾರಮಾರ್ಥ ಸತ್ಸಂಗ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವದರಿಂದ ಮಾನವ ಜೀವನವು ಉದ್ದಾರವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ವಸಂತ ಮಹಾರಾಜರು ಹೇಳಿದರು.   

                               ಅವರು ಗ್ರಾಮದಲ್ಲಿ ನಡೆದ ಮಲ್ಲಪ್ಪ ಹೊಸಮನಿ ಮಹಾರಾಜರ ಪುಣ್ಯತಿಥಿ ಸಪ್ತಾಹದಲ್ಲಿ ಮಾತನಾಡುತ್ತಾ ಮಾಧನಾಂದರು ಸಾಕಷ್ಟು ಉದ್ಧಾರ ಮಾಡಿ ಭಕ್ತರನ್ನು ದೇವರನ್ನಾಗಿ ಮಾಡುವ ಕಾರ್ಖಾನೆ ಎಂದರು. ಪ್ರತಿಯೊಬ್ಬರಲ್ಲಿ ಸಂಸ್ಕಾರ ಬಹಳ ಮಹತ್ವದ್ದು. ಆಸ್ತಿ ಅದಿಕಾರ ಜನ ಬೆಂಬಲವಿದೆ ಎಂದು ಬಡವ ಅಮಾಯಕರ ಮೇಲೆ ಅನ್ಯಾಯ ಮಾಡೊದು ಮಹಾಪಾಪ. ನಾವು ಸಹಾಯ ಮಾಡಲೂ ಆಗದಿದ್ದರೂ ಸಹಾಯ ಮಾಡೋರಿಗೆ ಸಹಕಾರ ನೀಡಬೇಕು. ಪಾಪ ಪುಣ್ಯದ ಫಲವು ನಮಗೆ ದೊರೆಯುತ್ತದೆಂದು ಹೇಳಿದರು.

ಶ್ರೀಮಂತ ಮಹಾರಾಜರು ಮಾತನಾಡಿ ಗೋವಾ ಚಳುವಳಿಯಲ್ಲಿ ಮಲ್ಲಪ್ಪ ಮಹಾರಾಜರು ಪ್ರಮುಖ ಪಾತ್ರ ವಹಿಸಿ ದೇಶಕ್ಕಾಗಿ ದಿಟ್ಟತನದಿಂದ ಹೋರಾಡಿ ಹಸಿರು ಪತಾಕೆ ಹಾರಿಸಿದ್ದಾರೆ.ದೇವರು ಭಕ್ತಿ ನೀತಿಗೆ ಒಲಿಯುತ್ತಾನೆ. ಇನ್ನೊಬ್ಬರಿಗೆ ಮೋಸ ವಂಚನೆ ಹಗೆ ಸಾದಿಸುವದು ಹಾಗೂ ಸ್ವಾರ್ಥ ಭಾವನೆ ಬಿಟ್ಟು ಸಮಾಜ ,ಇನ್ನೊಬ್ಬರಿಗೆ ಸಹಾಯ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. 

                                                        ಈ ಸಮಯದಲ್ಲಿ ಮಹಾದೇವ ಮಹಾರಾಜರು. ಗಿರಿಮಲ್ಲಪ್ಪ ಮಹಾರಾಜರು. ತಿಕೋಟಾದ ಶಿವಾನಂದ ಶ್ರೀಗಳು.ಈರಯ್ಯ ಸ್ವಾಮಿಗಳು. ಬಾಳಯ್ಯ ಹಿರೇಮಠ. ಬಸಪ್ಪ ಹುಲಗಬಾಳ.ಸೇರಿದಂತೆ ಅನೇಕರಿದ್ದರು ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು. ವಿಮಲ ಬ್ರಹ್ಮ ನಿರೂಪಣೆ ಕಾರ್ಯಕ್ರಮದೊಂದಿಗೆ ಮಂಗಲವಾಯಿತು. 

Leave a Comment

Your email address will not be published. Required fields are marked *

error: Content is protected !!