ಮೂಡಲಗಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಡಿಯಲ್ಲಿ ಈಗಾಗಲೇ ಮಧ್ಯ ಮಧ್ಯವರ್ಜನ ಶಿಬಿರಗಳನ್ನು ಏರ್ಪಡಿಸಿದ್ದು ತಾಲೂಕಿನಾದ್ಯಂತ ಹಲವಾರು ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡು, ಹೊಸ ಜೀವನ ನಡೆಸುತ್ತಿದ್ದಾರೆ.
ಅಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಲವಾರು ರೀತಿಯಲ್ಲಿ ಸುಧಾರಣೆ ಹೊಂದಿರುತ್ತಾರೆ. ಇವರ ಬದುಕು ಹಸನಾಗಲಿ ಎನ್ನುವ ನಿಟ್ಟನಲ್ಲಿ, ಇನ್ನಷ್ಟು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿಗೆ ಅನುಪಾಲನೆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ಮತ್ತು ಹಾರುಗೆರಿ ಹೋಬಳಿಗೆ ಒಂದರಂತೆ, ಪೋಷಕರನ್ನು ಆಯ್ಕೆ ಮಾಡಿ. ಅವರಿಗೆ ವಿವಿಧ ಹಂತದಲ್ಲಿ ತರಬೇತಿಯನ್ನು ನೀಡುತ್ತಿದ್ದು .ಇದರ ಎರಡನೇ ಹಂತದ ಮೂಡಲಗಿ ಯೋಜನಾ ಕಚೇರಿಯಲ್ಲಿ ನಡೆದ ಮೂಡಲಗಿ ಹಾಗೂ ಹಾರೂಗೇರಿ ತಾಲೂಕ ನವಜೀವನ ಸಮಿತಿ ಪೋಷಕರ ತರಬೇತಿಯನ್ನು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪತ್ರಿಕಾ ವರದಿಗಾರರಾದ ಮುರಿಗೆಪ್ಪ ಮಾಲಗಾರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತರಬೇತಿಯ ಜನಜಾಗೃತಿ ವೇದಿಕೆ ಯೋಜನಾಧಕಾರಿಗಳಾದ ಶ್ರೀ ಭಾಸ್ಕರ ರವರು ನಡೆಸಿಕೊಟ್ಟರು.ಸಭೆಯಲ್ಲಿ ತಾಲೂಕಿನ ಯೋಜನಾಧಕಾರಿಗಳಾದ ರಾಜು ನಾಯ್ಕ.ಶಿಬಿರಾಧಿಕಾರಿ ಮನಮೋಹನ್ ರವರು. ವಲಯದ ಮೇಲ್ವಿಚಾರಕಿಯರಾದ ಶ್ರೀಮತಿ ರೇಣುಕಾ ಟಿ.ಶ್ರೀಮತಿ ಕಾಮಾಕ್ಷಿ ಸೇರಿದಂತೆ ಅನೇಕರಿದ್ದರು.