ಬೆಳಗಾವಿ ಜಿಲ್ಲಾ ವಿಭಜನೆ ಕೂಗು ; ಜೇನುಗೂಡಿಗೆ ಕೈ ಹಾಕುತ್ತಾ ರಾಜ್ಯ ಸರ್ಕಾರ 

Share the Post Now

ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಹಾಗೂ ತುಮಕೂರು ಜಿಲ್ಲಾ ವಿಭಜನೆ ಮಾತು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಪ್ರಾದೇಶಿಕ ಆಯುಕ್ತರ ಬಳಿ ಜಿಲ್ಲಾ ವಿಭಜನೆ ಕುರಿತು ಮಾಹಿತಿಯನ್ನು ಸರ್ಕಾರ

 ಕೇಳಿದೆ ಎಂದು ಹೇಳಲಾಗುತ್ತಿದೆ. ಆದರೆ ಇವೆರಡರ ನಡುವೆ ಸಿದ್ದು ಸರ್ಕಾರ ಜಿಲ್ಲಾ ವಿಭಜನೆ ಜೇನುಗೂಡಿಗೆ ಕೈ ಹಾಕುವ ಸಾಧ್ಯತೆ ಕಡಿಮೆ.‌

ಈಗಾಗಲೇ ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗದಲ್ಲಿ ಬೈಲಹೊಂಗಲ, ಚಿಕ್ಕೋಡಿ ಹಾಗೂ ಬೆಳಗಾವಿಯಾಗಿ ವಿಂಗಡಿಸಬೇಕು ಎಂಬ ಚರ್ಚೆ ದಶಕಗಳಿಂದಲೂ ಇದೆ. ಈ ಕುರಿತು ಅದೆಷ್ಟೋ ವರ್ಷಗಳಿಂದ ಹೋರಾಟ ನಡೆಯುತ್ತಿವೆ. ಚಿಕ್ಕೋಡಿ ಜಿಲ್ಲಾ ವಿಭಜನೆ ಕುರಿತು ಅನೇಕು ಹೋರಾಟ ಮಾಡಿ ತಮ್ಮ ಪ್ರಾಣವನ್ನೂ ಕೊಟ್ಟಿದ್ದಾರೆ. ಇಷ್ಟೇಲ್ಲಾ ಹೋರಾಟ ನಡೆದರು ಜಿಲ್ಲಾ ವಿಭಜನೆ ಮಾತ್ರ ಕನಸಾಗಿಯೇ ಉಳಿದಿದೆ.

ಹೇಳಿಕೇಳಿ ಬೆಳಗಾವಿ ಒಂದು ರಾಜಕೀಯವಾಗಿ ಪ್ರಭಲವಾದ ಜಾಗ. ಇಲ್ಲಿನ ರಾಜಕಾರಣಿಗಳು ಪಕ್ಷ ಮೀರಿ ಬೆಳೆದಿದ್ದಾರೆ. ಮೇಲ್ನೋಟಕ್ಕೆ ಜಿಲ್ಲಾ ವಿಭಜನೆ ಪರವಾಗಿ ಮಾತನಾಡಿದರೆ ಒಳಗೊಳಗೆ ವಿರೋಧ ಇದೆ ಎಂಬುದು ಸಾರ್ವಕಾಲಿಕ ಸತ್ಯ. ಎಲ್ಲಿ ಬೆಳಗಾವಿ ಜಿಲ್ಲೆ ವಿಭಜನೆಯಾದರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಆತಂಕ ಅನೇಕರಲ್ಲಿದೆ.

ಜಿಲ್ಲೆಯ ಅನೇಕ ನಾಯಕರು ಬೆಳಗಾವಿ ವಿಭಜನೆಗೆ ಆಸಕ್ತಿ ತೋರುತ್ತಿಲ್ಲ. ಅವರಿಗೆ ಜಿಲ್ಲೆಯ ವಿಭಜನೆಯಿಂದ ರಾಜಕೀಯವಾಗಿ ಹೊಡೆತ ಬೀಳುತ್ತದೆ ಎಂಬ ಆತಂಕ ಇದ್ದೇ ಇದೆ. ಹೊಸ ಜಿಲ್ಲಾ ಕೇಂದ್ರವಾದರೆ ತಮಗೆ ಸಿಗುವ ರಾಜಮರ್ಯಾದೆ ಎಲ್ಲಿ ಕಳೆದುಹೋಗುತ್ತದೆ ಎಂಬ ಆತಂಕ ಹೊಸದಲ್ಲಿ.

ಬೆಳಗಾವಿ ಜೊತೆ ಬೈಲಹೊಂಗಲ ಹಾಗೂ ಚಿಕ್ಕೋಡಿ ಜಿಲ್ಲೆಗಳಾದರೆ ಜನರ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ.  ಎರಡು ವಿಧಾನಸಭಾ ಕ್ಷೇತ್ರ ಹೊಂದಿರುವ ಕೊಡಗಿಗೆ ಬರುವಷ್ಟು ಸರ್ಕಾರದ ಅನುದಾನ ಬೆಳಗಾವಿ ಜಿಲ್ಲೆಗೂ ಬರುತ್ತಿದೆ.‌ ಇದರಿಂದ 18 ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆ ಅಭಿವೃದ್ಧಿ ಹೇಗೆ ಸಾಧ್ಯ.

ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಅದೆಷ್ಟೋ ಜನ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರಿಂದ ನಿಧಾನವಾದರು ಮುಂದಿನ ಪೀಳಿಗೆಗೆ ಸಹಕಾರಿ ಆಗುವುದರಲ್ಲಿ ಎರಡು ಮಾತಿಲ್ಲ. ಹೊಸ ರಾಜಕಾರಣಿಗಳು, ಆಡಳಿತ ವಿಭಾಗ, ಸರ್ಕಾರದ ಸೌಲಭ್ಯ ಸೇರಿದಂತೆ ಅನೇಕ ಲಾಭಗಳಿವೆ.

ಸಿದ್ದರಾಮಯ್ಯ ಸರ್ಕಾರ ಗಟ್ಟಿ ನಿರ್ಧಾರ ತಗೆದುಕೊಂಡರೆ ಬೆಳಗಾವಿ ಜನರ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ.

Leave a Comment

Your email address will not be published. Required fields are marked *

error: Content is protected !!