ಗುರುಹಿರಿಯರನ್ನು ಗೌರವಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ: ಅಡವಿ ಸಿದ್ದರಾಮ ಶ್ರೀಗಳು

Share the Post Now

ಹಳ್ಳೂರ

ವಯಸ್ಸಾದ ತಂದೆ ತಾಯಿಯರನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ  ಕಳಿಸಿ ಪಾಪಕ್ಕೆ ಗುರಿಯಾಗದೆ ಅವರಲ್ಲಿ  ಬೇಧ ಭಾವ ಮಾಡದೆ ಸರಿಯಾಗಿ ಆರೈಕೆ ಮಾಡಿದರೆ ಅವರಿಗೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಹಾಗೂ ನಿಮಗೂ ಕೂಡ ಪುಣ್ಯ ಪ್ರಾಪ್ತಿಯಾಗುತ್ತದೆಂದು ಶಿವಾಪೂರ ಅಡವಿ ಸಿದ್ದರಾಮ ಶ್ರೀಗಳು ಹೇಳಿದರು.       

       ಅವರು ನೀರಲಖೋಡಿಯಲ್ಲಿ  ನಡೆದ ಶಿವನವ್ವಾ ಬಾಳಪ್ಪ ಕುಳಲಿ ಆವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಈಗಿನ ಕಾಲದಲ್ಲಿ ನೂರು ವರ್ಷ ದಾಟಿ ಶತಮಾನೋತ್ಸವ ಆಚರಣೆ ಮಾಡಿಕೊಳ್ಳುವರು ಪುಣ್ಯವಂತರು ಹಾಗೂ ಅಪರೂಪ ಹಿಂದಿನ ಕಾಲದ ಹಿರಿಯರು ಸತ್ಯದ ದಾರಿಯಲ್ಲಿ ನಡೆದು ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಾ ಒಳ್ಳೆಯ ಆಹಾರ ಸೇವನೆ ಮಾಡಿ ಶರೀರವನ್ನು ಸದೃಢವಾಗಿಟ್ಟುಕ್ಕೊಂಡು ನೂರಾರು ಕಾಲ ಸುಖವಾಗಿ ಬಾಳಿ ಬದುಕಿ ಸಂಸಾರ ನಡೆಸುತ್ತಾ ಬಂದಿದ್ದಾರೆ. ಈಗಿನ ಕಾಲದಲ್ಲಿ ಯುವಕರು ದುಶ್ಚಟಕ್ಕೆ ಬಲಿಯಾಗಿ ಕಡಿಮೆ ವಯಸ್ಸಿನಲ್ಲಿಯೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಹೇಳಿದರು.       

                                  ಇದೆ ಸಮಯದಲ್ಲಿ ಶಿವನವ್ವಾ ಕುಳಲಿ ಅವರಿಗೆ ಮೊಮ್ಮಕ್ಕಳು, ಮರಿ ಮಕ್ಕಳು ಹೂ ಹಾರಿಸಿ ಬಂಗಾರ ಹಾಕಿ ಶುಭ ಹಾರೈಸಿದರು. ಇದೆ ಸಂಧರ್ಬದಲ್ಲಿ ರಾಮಪ್ಪ ಕುಳಲಿ. ಹಾಲಪ್ಪ ಕಂಟೆಪ್ಪಗೊಳ. ಕೆಂಪಣ್ಣ ಅಂಗಡಿ. ಸಂಜು ಶಿವಾಪೂರ. ಮುರಿಗೆಪ್ಪ ಮಾಲಗಾರ. ಮಲ್ಲಪ್ಪ ಮುಗಳಖೋಡ. ಮಲ್ಲಪ್ಪ ಕುಳಲಿ. ಶ್ರೀಶೈಲ ಹೊಸಟ್ಟಿ. ಶಿವಪ್ಪ ಕಾಪಸಿ.ಬಾಳಪ್ಪ ಕುಳಲಿ ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!