ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಜೀವನ ಬೆಳಕು :ನಾಗರತ್ನ ಹೆಗಡೆ

Share the Post Now

ಹಳ್ಳೂರ

ಬಡವರು ಸುಖ ಜೀವನ ನಡೆಸಲು ಜನಪರ ಕಾರ್ಯಕ್ರಮಗಳನ್ನು ಮಾಡಿ ಸಹಸ್ರಾರು ಜನರ ಬಾಳಿಗೆ ಬೆಳಕು ನೀಡುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿದೆ ಎಂದು ಜಿಲ್ಲಾ ನಿರ್ದೇಶಕರಾದ ನಾಗರತ್ನ ಹೆಗಡೆ ಅವರು ಹೇಳಿದರು.

ಅವರು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ ಡಿ ವ ಹಾಗೂ ವ್ಹೀಲ್ ಚೇರ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಅಂಗವಿಕಲರಿಗೆ ವ್ಹೀಲ್ ಚೇರ್, ಸುಜ್ಞಾನ ನಿಧಿ, ನಿರ್ಗತಿಕರಿಗೆ ಮನೆ ಕಟ್ಟಿಸಿ ಕೊಡುವುದು ಬಡ ಕುಟುಂಬ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಲಾಗುವುದು,ವಯೋವೃದ್ಧರಿಗೆ ಮಾಸಾಶನ ಹೀಗೆ ಅನೇಕ ಜನ ಪರ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆಂದು ಹೇಳಿದರು.

ದುಂಡಪ್ಪ ಕೊಂಗಾಲಿ ಹಾಗು ಮುರಿಗೆಪ್ಪ ಮಾಲಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೂಡಲಗಿ ತಾಲೂಕಿನ ರೂರಲ್  ವಲಯದ ಹಳ್ಳೂರು ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪೂಜ್ಯ  ಡಾ!! ಡಿ. ವೀರೇಂದ್ರ ಹೆಗ್ಗಡೆ ಯವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ  ನೀಡಿದ ರೂ. 2 ಲಕ್ಷದ ಡಿ. ಡಿ. ಯನ್ನು ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಮತಿ ನಾಗರತ್ನಾ ಹೆಗಡೆ ಗ್ರಾಮದ ಹಿರಿಯರಿಗೆ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀ ರಾಜು ನಾಯ್ಕ. ವಲಯದ ಮೇಲ್ವಿಚಾರಕಿ ರೇಣುಕಾ  ಟಿ. ಸೇವಾ ಪ್ರತಿನಿಧಿ ಸವಿತಾ ಪೂಜೇರಿ.ಒಕ್ಕೂಟ ಅಧ್ಯಕ್ಷ ಒಕ್ಕೂಟ ಅಧ್ಯಕ್ಷೆ ಕೌಸರ್ ಹಣಗಂಡಿ.ಹಿರಿಯರಾದ ಆಡಿವೆಪ್ಪ ಪಾಲಬಾಂವಿ.ಶಿವಪ್ಪ ನಿಡೋಣಿ. ಮುಪ್ಪಯ್ಯ ಹಿಪ್ಪರಗಿ.ಯಮನಪ್ಪ ನಿಡೋಣಿ.ಪುಂಡಲೀಕ ಸಿದ್ದಾಪೂರ.ಭೀಮಪ್ಪ ಹೊಸಟ್ಟಿ.ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!