ಎಲ್ಲ ವರ್ಗದ ಬಡವರಿಗೆ ಪಂಚ ಗ್ಯಾರಂಟಿ ಯೋಜನೆ ಅನುಕೂಲ ವಾಗಿದೆ :ಶಾಸಕ ಮಹೇಂದ್ರ ತಮ್ಮಣ್ಣವರ

Share the Post Now

ರಾಯಭಾಗ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭ ಕ್ಕೆ ಚಾಲನೆ

ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ್ ರಾಯಬಾಗ ಹಾಗೂ ಪುರಸಭೆ ಕುಡಚಿ. ಹಾರೂಗೇರಿ ಮುಗಳಖೋಡ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ಯಾರಂಟಿ ಯೋಜನೆಗಳ ಸಮಾವೇಶ ಸಮಾರಂಭ ಕಾರ್ಯಕ್ರಮ ಜರುಗಿತು

ಈ ಸಂದರ್ಭದಲ್ಲಿ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮನವರ ಅವರು ಮಾತನಾಡಿ ಬಿಜೆಪಿ ಪಕ್ಷವು ಹತ್ತು ವರ್ಷಗಳಿಂದ ಕೇವಲ ಸುಳ್ಳಿನ ಹಾದಿಯಲ್ಲಿ ನಡೆಯುತ್ತಿದ್ದು ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯಾವುದೇ ಉದ್ಯೋಗ ನೀಡಿಲ್ಲ , ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ನಿರ್ಗತಿಕರರಿಗೆ ಬಡವರಿಗೆ ಕುಲಿಕಾರ್ಮಿಕರಿಗೆ ಜೀವನ ದುಸ್ತರಮಾಡಿದ್ದಾರೆ ಹಾಗಾಗಿ ಬರುವಂತಹ ಲೋಕಸಭಾ ಚುನಾವಣೆಯಲ್ಲಿ ನಮ್ಮ ರಾಜ್ಯದಿಂದ ಅತೀ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಬೇಕು  ಬಡವರ, ದಿನ ದಲಿತರ ಕುಲಿಕಾರ್ಮಿಕರ ಬಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಮತ್ತಷ್ಟು ಬಳಪಡಿಸಬೇಕೆಂದು ಮನವಿ ಮಾಡಿದರು

( ಪಲಾನುಭವಿ1:ಜಯಶ್ರೀ ಹೊಸಪೇಟಿ ಮುಗಳಖೋಡ, ) ಗೃಹ  ಲಕ್ಷ್ಮಿ ,ಅನ್ನಭಾಗ್ಯ, ಗೃಹಜ್ಯೋತಿ,ಯಿಂದ ಬಡವರ ನಿರ್ಗತಿಕರ ಮಹಿಳೆಯರ ಬಾಳಿನಲ್ಲಿ ಹೊಸ ಚೈತನ್ಯ ಉಂಟು ಮಾಡಿದೆ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಗಳಿಂದ ಎಲ್ಲ ವರ್ಗದ ಜನಗಳಿಗೆ ಅನುಕೂಲವಾಗಿದೆ


(ಪಲಾನುಭವಿ2 :ಮಂಜುಳಾ ಬಕಾಟಿ  )ಬಡವರು ನಿರ್ಗತಿಕರ ಕೂಲಿಕಾರ್ಮಿಕರು ಯಾರು ಸಹಿತ ಹಸಿವಿನಿಂದ  ಮಲಗಬಾರದು  ಎಂದು ಅನ್ಯಭಾಗ್ಯ ಯೋಜನೆಯನ್ನು ತಂದು ಎಲ್ಲ ವರ್ಗದ ಜನರ ಹೊಟ್ಟೆ ತುಂಬಿಸಿದ ಮಾನ್ಯ ಕರ್ನಾಟಕ ಸರಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಹೇಳಲುಭಯಸುತ್ತೇನೆ

ಈ ಸಂದರ್ಭದಲ್ಲಿ ರಾಯಬಾಗ ತಹಸೀಲ್ದಾರ್, ಹಾರೂಗೇರಿ ಪುರಸಭೆ ಮುಖ್ಯಧಿಕಾರಿ ಅಭಿಷೇಕ್ ಪಾಂಡೆ ಕಾಂಗ್ರೆಸ್ ಮುಖಂಡರಾದ ಭೀಮು ಬದನೇಕಾಯಿ ಹಮೀದ್ ರೋಹಿಲೆ ಸಿಡಿಪಿಒ ಸಂತೋಷ್ಕುಮಾರ್ ಕಾಂಬಳೆ ಕುಡಚಿ ಯುವ ಘಟಕದ ಅಧ್ಯಕ್ಷ ಪ್ರದೀಪ್ ಹಾಲಗುಣಿ ಹೆಸ್ಕ್ಯಾಮ್ ಅಧಿಕಾರಿ ಆನಂದ್ ನಾಯ್ಕ್ ಆರ್ ಎಂ ಗಸ್ತಿ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!