ಹಳ್ಳೂರ
ದಾಖಲೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 1 ಲಕ್ಷ 50 ಸಾವಿರ ರೂ. ಅನ್ನು ಮೂಡಲಗಿ ತಾಲೂಕಿನ ಹಳ್ಳೂರ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರದಂದು ಎಸ್ ಎಸ್ ಟಿ ತಂಡದವರಿಂದ ವಾಹನ ತಪಾಸಣೆ ಮಾಡುವ ಸಮಯದಲ್ಲಿ ಸಿಕ್ಕ ಹಣವನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಎಂ ವಿ ಮುರನಾಳ. ಆನಂದ ಗೌಡರ.ಎಸ್‌ಎಸ್‌ಟಿ ತಂಡದವರಾದ ಉದಯಕುಮಾರ ಬೆಳ್ಳುಂಡಗಿ. ಶ್ರವಣಕುಮಾರ ಹುಬ್ಬಳ್ಳಿ. ಬಸಪ್ಪ ಪಾಟೀಲ ಸೇರಿದಂತೆ ಇನ್ನಿತರರಿದ್ದರು.