ಹೌದು ಮಾಜಿ ಐಎಎಸ್ ಅಧಿಕಾರಿ 2023ರ ರಾಯಬಾಗ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಂಭು ಕಲ್ಲೋಳಿಕರ್ ಅವರು ಮೂರು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ
ಈ ಹಿಂದೆ ಶಂಭು ಕಲ್ಲೋಳಿಕರ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಅನ್ನು ಕೇಳಿದರು ಆದರೆ ಇವರಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮನೆಹಾಕಲಾಗಿತ್ತು ಇದರಿಂದ ರೊಚ್ಚಿಗೆದ್ದ ಕಲ್ಲೋಳಿಕರ್ ರಾಯಬಾಗ ಪಟ್ಟಣದಲ್ಲಿ ಬೃಹತ್ ಸಮಾವೇಶ ಮಾಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 2,000 ಮತಗಳ ಅಂತರದಿಂದ ಸೋತಿದ್ದರು
ಈಗ ಮತ್ತೆ 2024ರ ಚಿಕ್ಕೋಡಿ ಲೋಕಸಬಾ ಕ್ಷೇತ್ರದಿಂದ ಎಂಟ್ರಿ ಕೊಟ್ಟಿದ್ದಾರೆ ಈಗಾಗಲೇ ಹಲವಾರು ಸಭೆಗಳನ್ನು ಮಾಡಿ ರಾಜಕೀಯ ಮುಖಂಡರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಇವರ ಸ್ಪರ್ಧೆಯಿಂದ ಯಾವ ಪಕ್ಷಕ್ಕೆ ಎಷ್ಟು ಲಾಭ ಎಷ್ಟು ನಷ್ಟ ಎಂದು ಮುಂದಿನ ದಿನಮಾನಗಳಲ್ಲಿ ಕಾದು ನೋಡಬೇಕು ಒಟ್ಟಿನಲ್ಲಿ ಮೂರು ರಾಜಕೀಯ ಪಕ್ಷದವರಿಗೆ ಇವರ ಸ್ಪರ್ಧೆಯಿಂದ ನಡುಕ ಹುಟ್ಟಿದೆ ಎಂದು ಸಾರ್ವಜನಿಕ ವಲಯವಾಗಿ ಕೇಳಿಬರುತ್ತಿದೆ





