ಮುಗಳಖೋಡ : ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಅವರು ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದು, ನಮ್ಮ ಸಂವಿಧಾನವನ್ನು ರಚಿಸುವ ಮೂಲಕ ನಮಗೆಲ್ಲ ದಾರಿ ದೀಪ ಆಗಿದ್ದಾರೆ. ದಿವ್ಯ ಜ್ಞಾನ ಹೊಂದಿದ ವ್ಯಕ್ತಿತ್ವವನ್ನು ನಾವು ಇವರಲ್ಲಿ ಕಾಣಬಹುದು. ಇಂತ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಡಾ.ಪಿ .ಬಿ ಕೊರವಿ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಸಂಸ್ಥೆಯಾದ ಡಾ. ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ ಯುವ ರೇಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಏರ್ಪಡಿಸಿದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 133ನೇ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀ ಕೆ ಪಿ ಹಾಲಳ್ಳಿ ಹಾಗೂ ಶ್ರೀ ಪಿ.ಎ. ನಾಯಕ ಫೋಟೋ ಪೂಜಾ ಕಾರ್ಯಕ್ರಮ ನೆರವೇರಿಸಿ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ. ಪ್ರಕಾಶ ಕಂಬಾರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಕೆ ಪಿ ಹಾಲಳ್ಳಿ ಎಚ್.ಎಮ್ ಕಂಕನವಾಡಿ, ಪಿ ಎ ನಾಯಕ, ಎಸ್ ಆರ್ ತೇಲಿ, ಎಸ್ ಬಿ ಮಸರಗುಪ್ಪಿ, ಎಲ್. ಕೆ. ಕರೀಭಿಮಗೋಳ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.