ವರದಿ: ರಾಜಶೇಖರ ಶೇಗುಣಸಿ.
ಮುಗಳಖೋಡ: ಜ್ಯೋತಿಬಾ ಫುಲೆ ಅವರ ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಿದೆ. ಭಾರತ ದೇಶಕ್ಕೆ ಅವರ ಶೈಕ್ಷಣಿಕ ಕೊಡುಗೆ ಅಪಾರವಾದದ್ದು ಎಂದು ಪ್ರಾಚಾರ್ಯ ಪಿ.ಸಿ.ಕಂಬಾರ ಹೇಳಿದರು.
ಅವರು ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮ ಜ್ಯೋತಿಬಾ ಫುಲೆ ಅವರ 197 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಬೆಳೆಸಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದುವುದು ಅಂತಹ ಕಾರ್ಯದಲ್ಲಿ ಭಾಗಿಯಾದ ಫುಲೆ ದಂಪತಿಗಳಂತ ಮಹಾತ್ಮರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೊ. ಆರ.ಎಸ್.ಶೇಗುಣಸಿ ಪೋಟೋ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ, ಪರೀಕ್ಷಾ ವಿಬಾಗದ ಮುಖ್ಯಸ್ಥ ಕೆ.ಪಿ.ಹಾಲಳ್ಳಿ, ರೇಡ್ ಕ್ರಾಸ್ ಘಟಕದ ಸಂಯೋಜಕ ಪ್ರದೀಪ್ ನಾಯಿಕ, ಗ್ರಂಥ ಪಾಲಕ ಸಂಗಣ್ಣ ತೇಲಿ, ಕಛೇರಿ ಅಧೀಕ್ಷಕ ಹುಸೇನ್ ಎಲಿಗಾರ, ಬಸವರಾಜ ಸಣ್ಣಕ್ಕಿನವರ, ಕುಮಾರಿ ರತ್ನಾ ಖೇತಗೌಡರ ಉಪಸ್ಥಿತರಿದ್ದರು.