ನೀರು ಹಂಚಿಕೆಯಲ್ಲಿ ತಾರತಮ್ಯ: ರೈತರ ಹೋರಾಟ.

Share the Post Now


ವರದಿ:ರಾಜಶೇಖರ ಶೇಗುಣಸಿ.



ಹಳ್ಳಕ್ಕೆ ನೀರು ಹರಿಸುವವರೆಗೂ ಪ್ರತಿಭಟನೆ ಹಿಂದಕ್ಕಿಲ್ಲ: ರಮೇಶ ಖೇತಗೌಡರ.


ರಾಯಬಾಗ.ಮುಗಳಖೋಡ: ಪಟ್ಟಣದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ನೀರು ಹಳ್ಳಗಳಿಗೆ ಹಂಚಿಕೆಯಾಗದೆ ಗೇಟ್ ಬಂದ್ ಮಾಡಲಾಗಿದೆ, ಆದರೆ ಮೂಡಲಗಿ ತಾಲೂಕಿನ‌ ಹಳ್ಳೂರ ಹಾಗೂ ಇನ್ನೀತರ ಪ್ರದೇಶಗಳಿಗೆ ನೀರು ಹಂಚಿಕೆ ಮಾಡಿದ್ದನ್ನು ಮಾತ್ರ ನಿಲ್ಲಿಸಿಲ್ಲ, ಕೇವಲ ಮುಗಳಖೋಡ ಹಳ್ಳದ ನೀರು ಮಾತ್ರ ಏಕೆ ತಡೆಹಿಡಿದಿದ್ದಾರೆ ಎಂದು ರೈತ ಮುಖಂಡ ಗೌಡಪ್ಪ ಖೇತಗೌಡರ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅವರು ಮುಗಳಖೋಡ ಜೆಎಲಬಿಸಿ ಐಬಿ ಮೇಲೆ ನಡೆಸಿದ  ಧರಣಿಯಲ್ಲಿ ಭಾಗಿಯಾಗಿ ತಮ್ಮ ಆಕ್ರೋಶ ಹೊರಹಾಕಿದರು.

ನಂತರ ಮಾತನಾಡಿದ ರಮೇಶ ಖೇತಗೌಡರ, ನೀರಿನ ಅಭಾವದಿಂದಾಗಿ ಇಂದು ಬೆಳಿಗ್ಗೆ ಖುದ್ದಾಗಿ ಎಲ್ಲ ಎಸ್ಕೇಪ್ (ಹಳ್ಳ) ಗಳಿಗೆ ಭೇಟಿ ಮಾಡಿ, ವಿಡಿಯೋ ಚಿತ್ರಿಕರಣಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ; ಪೋನ್ ಕರೆಗೂ ಸಿಗುತ್ತಿಲ್ಲ. ಹೀಗೆ ಮುಂದುವರೆದರೆ ನಾವು ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಥಳದಲ್ಲಿ ನೂರಾರು ರೈತರು ಸೇರಿ ನಮ್ಮ ಎಸ್ಕೇಪ್‌ಗೆ  ನೀರು ಬಿಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ, ತಮ್ಮ ಧರಣಿ ಮುಂದುವರೆಸಿದ್ದಾರೆ.

ಈ ಸಂದರ್ಭದಲ್ಲಿ ಅಶೋಕ ಕೊಪ್ಪದ್, ಪರಪ್ಪ ಖೇತಗೌಡರ, ರಾಜು ನಾಯಕ್, ಉಮೇಶ ಹೊಸತೋಟ, ಗೌಡಪ್ಪ ಎಲ್. ಖೇತಗೌಡರ, ಸಂಗಪ್ಪ ಬಾಳೋಜಿ, ಅಜ್ಜಪ್ಪ ಬೆಳಗಲಿ ಸೇರಿದಂತೆ ‌ನೂರಾರು ರೈತರು ಧರಣಿಯಲ್ಲಿ ನಿರತರಾಗಿದ್ದಾರೆ. ಹಾರೂಗೇರಿ ಸಿಪಿಐ ರವಿಚಂದ್ರನ್ ಬಡಪಕೀರಪ್ಪನ್ನವರ, ಪಿಎಸ್‌ಐ ಗಿರಮಲ್ಲಪ್ಪ ಉಪ್ಪಾರ, (ಅಪರಾಧ ವಿಭಾಗ) ಪಿಎಸಐ ವಿಜಯ್ ಕಾಂಬಳೆ ಸೇರಿದಂತೆ ಪೊಲೀಸ್ ಸಿಬ್ಬಂದಿ, ಮೀಸಲು ಪಡೆಯವರು ಬಿಗಿ ಬಂದೂಬಸ್ತ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *

error: Content is protected !!