ಪ್ರಿಯಾಂಕಾ ಜಾರಕಿಹೋಳಿಗೆ ತಮ್ಮ ಮತ ನೀಡಿ: ಮಹೇಂದ್ರ ತಮ್ಮಣ್ಣವರ.

Share the Post Now



ಬಡವರ ಶ್ರೇಯೋಭಿವೃದ್ದಿಗಾಗಿ ಪ್ರಿಯಾಂಕಾ ಜಾರಕಿಹೊಳಿಗೆ ಮತ ನೀಡಿ, ಮತ್ತಷ್ಟು ಗ್ಯಾರಂಟಿ ನಿಮ್ಮದಾಗಿಸಿಕೊಳ್ಳಿ:

ವರದಿ: ಸಂಗಮೇಶ ಹಿರೇಮಠ.

ಮುಗಳಖೋಡ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆದಿದೆ. ಈಗ ಲೋಕಸಭೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮೀ ಯೋಜನೆಯಡಿ ಒಂದು ಲಕ್ಷ ರೂಪಾಯಿಗಳನ್ನು ಪ್ರತಿ ಮನೆಗೂ ಮುಟ್ಟಿಸುವುದರ  ಜೊತೆಗೆ ಬಡವರ ಶ್ರೇಯೋಭಿವೃದ್ದಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತೆವೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಅವರು ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಅವರ ಮನೆಯಂಗಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮುಗಳಖೋಡ ಪಟ್ಟಣದಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಬಹುಮತವನ್ನು ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ನೀಡಿ ಆಶೀರ್ವದಿಸಬೇಕೆಂದು ಪ್ರಿಯಾಂಕಾ ಪರ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ಡಾ.ಸಿ.ಬಿ.ಕುಲಿಗೋಡ, ಮಾಟ  ಮಾಡುವ ಕಲೆ ಹೊಂದಿರುವ ಮೋದಿ ಅವರ ಮಾತಿಗೆ ಮರುಳಾಗದೆ, ಪ್ರತಿ ಕ್ಷಣವೂ ಬಡವರ ಬೆಳವಣಿಗೆಯತ್ತ‌ ಗಮನಹರಿಸುವ ಕಾಂಗ್ರೆಸ್ ಸರ್ಕಾರಕ್ಕೆ ಕೈ ಜೋಡಿಸಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ,  ಮನೆ ಮಗಳು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ನೀಡಿ ಗೆಲ್ಲಿಸಿ ಕೊಟ್ಟರೆ ಈ ಭಾಗದಲ್ಲಿ ಅಭಿವೃದ್ಧಿಗೆ ಮತ್ತಷ್ಟು ಮೆರಗು ಬಂದಂತಾಗುತ್ತದೆ ಎಂದರು.

ನಂತರ ಗಿರೀಶ್ ಬಿ. ಮಾತನಾಡಿ, ನಿಮ್ಮ  ಪ್ರತಿ ಮನೆಗೂ ತಲುಪುವ ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಗಮನಿಸಿ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ  ಮತ್ತಷ್ಟು ಗ್ಯಾರಂಟಿಗಳನ್ನು ನೀಡಲು ಮುಂದಾಗಿದೆ. ಕಾಂಗ್ರೆಸ್ ಪಕ್ಷದಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ  ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಅವರಿಗೆ ತಮ್ಮ ಮತ ನೀಡಬೇಕೆಂದು ಮತದಾರರಲ್ಲಿ ಕೇಳಿಕೊಂಡರು.

ಈ ಸಂದರ್ಭದಲ್ಲಿ  ದಸ್ತಗಿರಿ ಕಾಗವಾಡೆ, ಪ್ರದೀಪ ಪಾಲ್ಗುಣಿ, ಪ್ರಮೋದ ಬೆಳಗಲಿ, ಡಿ.ಎಸ್. ನಾಯಿಕ, ಬಸವರಾಜ ಸೇನಾಯಿ, ಎನ್.ಎಸ್.ಚೌಗಲಾ, ಭರಮು ಬದ್ನಿಕಾಯಿ, ರಾಮಣ್ಣ ಗಸ್ತಿ, ಪುರಸಭೆ ಸದಸ್ಯರಾದ ಸಂಜಯ ಕುಲಿಗೋಡ, ಪರಪ್ಪ ಖೇತಗೌಡರ, ಮಹಾವೀರ ಕುರಾಡೆ, ಅಶೋಕ ಹಳಿಂಗಳಿ,  ಹನುಮಸಾಹೇಬ ನಾಯಿಕ, ಪರಗೌಡ ಖೇತಗೌಡರ,  ಶಿವರಾಜ ಕನಾಳ, ಮಹಾದೇವ ಯರಡತ್ತಿ, ಶಿವನಿಂಗ ಯರಡತ್ತಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!