ಹಳ್ಳೂರ . ಲೋಕಸಭಾ ಚುನಾವಣೆ ದೇಶದ ಸುಭದ್ರತೆ ಭದ್ರ ಬುನಾದಿಯಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 10 ವರ್ಷದ ಆಡಳಿತದಲ್ಲಿ ಯಾವುದೆ ಭ್ರಷ್ಟಾಚಾರವಿಲ್ಲದೆ ಒಳ್ಳೆಯ ಆಡಳಿತ ನಡೆಸಿದ್ದಾರೆ ಮತ್ತೊಮ್ಮೆ ಮೋದಿ ಸರಕಾರ ಆಡಳಿತಕ್ಕೆ ಬಂದರೆ ಮಾತ್ರ ದೇಶವು ಸುಭದ್ರವಾಗುತ್ತದೆಂದು ಅರಬಾಂವಿ ಶಾಸಕರಾದ ಭಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಅವರು ಗ್ರಾಮದಲ್ಲಿ ನಡೆದ ಬೆಳಗಾವಿ ಲೋಕಸಭಾ ಚುನಾವಣೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಜಗದೀಶ ಶೆಟ್ಟರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ ಅರಬಾಂವಿ ಕ್ಷೇತ್ರದ ಎಲ್ಲಾ ಸಮಾಜ ಬಾಂದವರು ಒಗ್ಗಟ್ಟಾಗಿ ಬಿಜೆಪಿಗೆ ಮತ ನೀಡಿ ಬೆಳಗಾವಿ ಲೋಕಸಭಾ ಎಲ್ಲ ಕ್ಷೇತ್ರಗಳಿಗಿಂತ ಅರಬಾಂವಿ ಮತ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ ಅವರಿಗೆ ಅಧಿಕ ಮತ ಪಡೆಯಲು ಎಲ್ಲರೂ ಒಂದಾಗಿ ಪ್ರಾಮಾನಿಕ ಪ್ರಯತ್ನ ಮಾಡಿರಿ. ಮೇ 7 ಮತದಾನ ದಿನದಂದು ಹೆಚ್ಚು ಬಿಸಿಲು ಇರುವದರಿಂದ ಜನರಿಗೆ ತೊಂದರೆ ಆಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು . ಈ ಸಮಯದಲ್ಲಿ ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರೆ.ಹನಮಂತ ತೇರದಾಳ.ಮಲ್ಲಪ್ಪ ಛಬ್ಬಿ.ಲಕ್ಷ್ಮಣ ಕತ್ತಿ.ಮಾದೇವ ಹೊಸಟ್ಟಿ.ಬಸಪ್ಪ ಸಂತಿ.ಕುಮಾರ ಲೋಕನ್ನವರ. ಮುರಿಗೆಪ್ಪ ಮಾಲಗಾರ. ಮಹಾಂತೇಶ ಕುಡಚಿ.ಅಡಿವೆಪ್ಪ ಪಾಲಬಾಂವಿ.ಪ್ರಮೋದ ನುಗ್ಗಾನಟ್ಟಿ.ಸೇರಿದಂತೆ ಕಾರ್ಯಕರ್ತರು ಗ್ರಾಮದ ಪ್ರಮುಖರಿದ್ದರು.