ವರದಿ: ರಾಜಶೇಖರ ಶೇಗುಣಸಿ.
ಮುಗಳಖೋಡ (೧೦)(೨) ಪಟ್ಟಣದ ಸದಾಶಿವ, ಶ್ರೀಮತಿ ಕಾಂಚನಾ ಬಡಿಗೇರ ಪತ್ರಕರ್ತ ದಂಪತಿ ಪುತ್ರಿ ಕುಮಾರಿ ಜ್ಞಾನೇಶ್ವರಿ ದೇಸಾಯಿ 10 ನೇ ವರ್ಗದ ಪರಿಕ್ಷೆಯಲ್ಲಿ ಪ್ರತಿ ಶತ 92.32 (577)ಅಂಕ ಪಡೆದು ಉತ್ತಿರ್ಣಳಾಗಿದ್ದಾಳೆ.ತನ್ನ ಈ ಸಾಧನೆಗೆ ತಂದೆ ತಾಯಿ ಆಶಿರ್ವಾದ ಹಾಗೂ 1ನೇ ತರಗತಿಯಿಂದ 7 ನೇ ತರಗತಿ ವರೆಗೆ ಸ್ಥಳೀಯ ಶ್ರೀ ಸಿದ್ದಶ್ರೀ ಪ್ರಾಥಮಿಕ ಶಾಲೆ ಹಾಗೂ 8 ತರಗತಿ ಸರ್ಕಾರಿ ಪ್ರೌಢಶಾಲೆ, ಹಾಗೂ 9 ರಿಂದ 10 ನೇ ತರಗತಿ ವರೆಗೆ ಮೂಡುಬಿದಿರೆ ಆಳ್ವಾಸ್ ಶಾಲೆಗಳ ವಿದ್ಯೆ ನಿಡಿದ ಶಿಕ್ಷಕರ ಮಾರ್ಗದರ್ಶನ ನನ್ನ ಈ ಸಾಧನೆಗೆ ಮುಖ್ಯ ಕಾರಣ ಎಂದುಳು.
ಅವಳು ಕ್ಷೇತ್ರದ ಆರಾಧ್ಯ ದೈವ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಕೃರ್ತು ಗದ್ದುಗೆ ದರ್ಶನ ಆರ್ಶೀವಾದ ಪಡೆದು ಸಹೋದರ ಆದಿತ್ಯ ವರ್ಮನಿಂದ ಸಿಹಿ ಸ್ವೀಕರಿಸಿ ಎಲ್ಲರ ಆರ್ಶೀವಾದ ಹಾಗೂ ಮಾರ್ಗದರ್ಶನದಲ್ಲಿ ಉನ್ನತ ಶಿಕ್ಷಣ ಪಡೆದು ದೇಶ ಸೇವೆ ಸಲ್ಲಿಸುತ್ತೆನೆ ಎಂದು ಸಂತೋಷ ಭರಿತಳಾಗಿ ತನ್ನ ಮನದಾಳದ ಇಂಗಿತ ವ್ಯಕ್ತಪಡಿಸಿದಳು.