ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆ ಕಾನಟ್ಟಿ ಕೇಂದ್ರಕ್ಕೆ  ಪ್ರಥಮ.

Share the Post Now

                                             ಹಳ್ಳೂರ .

ಎಸ್ ಎಸ್ ಎಲ್ ಸಿ ಪರೀಕ್ಷೆ ಖಾನಟ್ಟಿ ಕೇಂದ್ರಕ್ಕೆ ಹಳ್ಳೂರ ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಶಾಲೆಯು ಪ್ರಥಮ ಸ್ಥಾನ ಪಡೆದಿದೆ.ಖಾನಟ್ಟಿ ಪರೀಕ್ಷಾ ಕೇಂದ್ರ ಮಟ್ಟದಲ್ಲಿ ಬರತಕ್ಕಂತ ಹಳ್ಳೂರ ಶಿವಾಪೂರ ಖಾನಟ್ಟಿ ಮುನ್ಯಾಳ ಗ್ರಾಮಗಳ ಪ್ರೌಢ ಶಾಲೆಗಳಲ್ಲಿಯೇ ಹಳ್ಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ   ಶ್ರೀ ಸೌಭಾಗ್ಯವತಿ ಸುಮಿತ್ರಾದೇವಿ ಪಾಟೀಲ ಪ್ರೌಢಶಾಲೆಯ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಾಧನೆಯನ್ನು ಸಾಬೀತುಪಡಿಸುವಲ್ಲಿ ಮತ್ತೊಮ್ಮೆ ತನ್ನ ಗುರು ತರವಾದ ಹೆಜ್ಜೆಯನ್ನು ಮುಂದೆ ಇಟ್ಟಿದೆ .2023-2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫಲಿತಾಂಶವು
ಹಳ್ಳೂರು ಗ್ರಾಮದ ಶ್ರೀ ಸೌಭಾಗ್ಯವತಿ ಸುಮಿತ್ರ ದೇವಿ ಪಾಟೀಲ್ ಪ್ರೌಢಶಾಲೆಯ  ಪ್ರಥಮ ಸ್ಥಾನ ಪಡೆದ ವಿಶೇಷ ಇಬ್ಬರು ವಿದ್ಯಾರ್ಥಿಗಳಾದ ಜಯಶ್ರೀ ಹೊಸತೋಟ ಅಂಕಗಳು 597- 95.52% ಮತ್ತು ಮುತ್ತಪ್ಪ ತುಕ್ಕಾನಟ್ಟಿ 
ಅಂಕಗಳು 597- 95.52% ಖಾನಟ್ಟಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ಖಾನಟ್ಟಿ ಪರೀಕ್ಷಾ ಕೇಂದ್ರಕ್ಕೆ ಹಾಗು ಹಳ್ಳೂರು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಸೌಭಾಗ್ಯಾವತಿ ಸುಮಿತ್ರಾ ದೇವಿ ಪಾಟೀಲ ಶಾಲೆಗೆ ದ್ವಿತೀಯ ಸ್ಥಾನ ಪಡೆದ ದರ್ಶನ ಪಾಂಡುರಂಗ ಮಾವರಕರ ಅಂಕಗಳು 542.86.72% ಹಾಗು ತೃತೀಯ ಸ್ಥಾನ ಪಡೆದ ಸುಮಯ್ಯ ದಸ್ತಗೀರ ನದಾಫ ಅಂಕಗಳು 536.85.76% ಅಂಕಗಳನ್ನು ಪಡೆದಿದ್ದಾರೆ.

ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲಿ ಹಳ್ಳೂರು ಮುಂಚೂಣಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಈ ರೀತಿಯಾದ ಉತ್ತಮ ಸಾಧನೆಯನ್ನು ಮಾಡಿದ್ದಕ್ಕಾಗಿ ಆ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರಾದ ಮಹಾಂತೇಶ ಕಂಬಾರ ಹಾಗು ಸಹ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಗೂ ಹಳ್ಳೂರು ಗ್ರಾಮದ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಈ ವಿದ್ಯಾರ್ಥಿಗಳ ಸಾಧನೆಯು ಹಿಂದಿನ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಹಾರೈಸುತ್ತೇವೆ.

Leave a Comment

Your email address will not be published. Required fields are marked *

error: Content is protected !!