ವರದಿ: ರಾಜಶೇಖರ ಶೇಗುಣಸಿ
ಮುಗಳಖೋಡ: ಸ್ಥಳೀಯ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಬ ನಿ ಕುಲಿಗೊಡ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ” ಆಚರಣೆಯನ್ನು ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಿ,ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಂದ ದುಡಿಮೆಯನ್ನು ಬಯಸುವುದಿಲ್ಲ ಎಂಬ ಪ್ರಮಾಣ ಮಾಡಲಾಯಿತು.
ಈ ಸಂದರ್ಬದಲ್ಲಿ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಮಧುಸೂದನ ಬೀಳಗಿ ಬಾಲಕಾರ್ಮಿಕ ವಿರೋಧಿ ದಿನದ ಉದ್ದೇಶ ಕುರಿತು ಮಾತನಾಡಿ, ಸುತ್ತಮುತ್ತ ಇಂತಹ ಯಾವುದಾದರೂ ಪದ್ಧತಿ ಕಂಡುಬಂದಲ್ಲಿ ಪೋಷಕರಿಗೆ ತಿಳುವಳಿಕೆ ಹೇಳಿ, ಸಹಾಯ ಮಾಡಬೇಕು,ಮತ್ತು ಈ ಪದ್ಧತಿ ಹೋಗಲಾಡಿಸಲು ನಮ್ಮದೇ ಆದ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.
ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೀ ಆರ್ ಶಿವಳ್ಳಿ ಮತ್ತು ಕೆ ಎ ಕಾಂಬಳೆ ಅವರು ಕೂಡ ಪ್ರಮಾಣ ವಚನ ಭೋದಿಸಿ ಮಾತನಾಡಿ ಬಾಲಕಾರ್ಮಿಕ ವಿರೋಧಿ ದಿನದ ಕುರಿತು ಪಾಲಕರಿಗೆ ಮೊದಲು ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರಾದ ಜೆ ಅರ್ ಮೋಘವಿರ್, ಬೀ ಎ ಹಿಪ್ಪರಗಿ, ಮಹಾಂತೇಶ್ ಬಾಲೋಜಿ , ಶಿವಲಿಂಗ ಖೋತ, ಕುಮಾರಿ ರಾಜಶ್ರೀ ಹುಬ್ಬಳ್ಳಿ, ಕುಮಾರಿ ಶೈಲಜಾ ಕೊಕಟನೂರ ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕುಮಾರಿ ರಾಜಶ್ರೀ ಹುಬ್ಬಳ್ಳಿ ನಿರೂಪಣೆ ಮಾಡಿ ಕುಮಾರಿ ಶೈಲಜಾ ಕೊಕಟನೂರ ವಂದಿಸಿದರು.