ಬಬಲಾಧಿ.
ಶ್ರೀ ಚಂದ್ರಗಿರಿ ದೇವಿ ಮೂಲ ಸಂಸ್ಥಾನ ಮಠ ಬಬಲಾಧಿ ಚಕ್ರವರ್ತಿ ಸದಾಶಿವ ದೇವರ ದರ್ಶನ ಪಡೆಯಲಾಯಿತು. ಗಂಗಾಧರ ಮಠದ ವಂಶಸ್ಥರು ಹಾಗೂ ಅರ್ಚಕರಾದ ಚಂದ್ರಶೇಖರ ಹಿರೇಮಠ ಅವರು ಬಬಲಾಧಿಯ ಹಿಂದಿನ ಸಂಪ್ರದಾಯದಂತೆ ಬೇಧ ಭಾವ ತೋರದೆ ಬಕ್ತರೊಡನೆ ಕುಳಿತುಕೊಂಡು ದಿನ್ ಹಾಕಿ ಎಲ್ಲರ ಜೊತೆಗೂಡಿ ಊಟ ಮಾಡಿದ್ದು ವಿಶೇಷವಾಗಿತ್ತು.
ನಂತರ ತ್ರಿಕಾಲ ಜ್ಞಾನಿ ಜಗದೊಡೆಯ ಸದಾಶಿವಪ್ಪನವರ ಹಿಂದಿನ ಕಾಲದಲ್ಲಿ ಆದ ಪವಾಡ ಮಹಿಮೆಗಳ ಬಗ್ಗೆ ಹೇಳಿದರು ಹಗುರ ಕಾಲ ಜಗಕ್ಕೆ ಬಂದಿದೆ ತಿಳಿದೂ ನಡಿರಣ್ಣ ಬಬಲಾಧಿ ಮುಂಡಿಗಿ ತಿಳಿದುಕೊಂಡು ಜೀವನ ಉದ್ದಾರ ಮಾಡಿಕೊಳ್ಳಿರಿ.ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡುವ ಹಗಲ ಗಳ್ಳರು ಹೆಚ್ಚಾಗಿದ್ದಾರೆ ಹುಷಾರಾಗಿರಿ ದುಷ್ಟರಿಗೆ ಹೆದರದೆ ಸತ್ಯಕ್ಕೆ ಸಹಾಯ ಸಹಕಾರ ಮಾಡಿರೆಂದು ಹೇಳಿದರು.
ಈ ಸಮಯದಲ್ಲಿ ರಾಮನ್ನ ಸುಣದೋಳಿ. ಭರಮಪ್ಪ ಸಪ್ತಸಾಗರ.ಯಾದಪ್ಪ ನಿಡೋಣಿ. ಶಿವಪ್ಪ ಲೋಕನ್ನವರ.ಭೀಮಪ್ಪ ನಿಡೋಣಿ. ಬಾಳಪ್ಪ ಬಡಿಗೇರ. ಮುರಿಗೆಪ್ಪ ಮಾಲಗಾರ. ಲಕ್ಷ್ಮಣ ದರೂರ. ನಾಗಪ್ಪ ಬಿಸನಾಳ. ಮಲ್ಲಪ್ಪ ಹುಲಗಬಾಳ. ಪುಂಡಲೀಕ ನಿಡೋಣಿ.ಮಾದೇವ ಬೆಣಚಿನಮರಡಿ ಸೇರಿದಂತೆ ಅನೇಕರಿದ್ದರು.