ಹಳ್ಳೂರ, ಕಪ್ಪಲಗುದ್ಧಿ,
ಗ್ರಾಮದಲ್ಲಿ ನೆಲೆಯಾಗಿ ನೆಲೆಸಿರುವ ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವ ದೇವಿ ವಾರ ಹಿಡಿಯುವ 3 ನೇ ವಾರದ ಕಾರ್ಯಕ್ರಮದ ನಿಮಿತ್ಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡೊಳ್ಳಿನ ಪದಗಳು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುರೂರು ಗ್ರಾಮಸ್ಥರು ಎಲ್ಲ ದೇವರಿಗೆ ಅನ್ನ ಅಂಬಲಿ ನೈವೇದ್ಯ ಅರ್ಪಿಸಿದರು.ಮುಂಜಾನೆ ಮುದ್ದು ಮಕ್ಕಳು ಎಲ್ಲ ದೇವರಿಗೆ ನೀರುಣಿಸಿದರು. ಮಾಲಿಕರು ಅಂಗಡಿಗಳನ್ನು ಸ್ವ ಇಚ್ಚೆಯಿಂದ ಬಂದ ಮಾಡಿದ್ದರು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅನ್ನ , ಅಂಬಲಿ ಪ್ರಸಾದ ವ್ಯವಸ್ಥೆ ನಡೆಯಿತು.