ಹಳ್ಳೂರ.
ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರದಂದು ಡೆಂಗ್ಯೂ ಜ್ವರದ ಬಗ್ಗೆ ಮುಂಜಾಗ್ರತೆ ಕ್ರಮವಾಗಿ ಗ್ರಾಮದ ಸ್ವಚ್ಚತೆ ಹಾಗೂ ತಮ್ಮ ಮನೆಗಳ ಸ್ವಚ್ಚತೆ ಬಗ್ಗೆ ಗಮನ ಹರಿಸಿ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನ ಹರಿಸಿರಿ ಎಂದು ವೈದ್ಯಾಧಿಕಾರಿಗಳ ಡಾ ಮಹೇಶ ಕಂಕಣವಾಡಿ ತಿಳಿಸಿದರು. ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನೇತ್ರ ಚಿಕಿತ್ಸೆಗಾಗಿ ಕಳಸಲಾಗಿದೆ. ಈ ಸಮಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಡವಳೇಶ್ವರ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ.ಸದಾಶಿವ ಹಾದಿಮನಿ.ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರಿದ್ದರು.