ಹಳ್ಳೂರ .ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ಮೂಡಲಗಿ ಇವರ ಆಶ್ರಯದಲ್ಲಿ ಮೂಡಲಗಿ ತಾಲೂಕಿನ ಸುನದೋಳಿ ಕಾರ್ಯ ಕ್ಷೇತ್ರದಲ್ಲಿ ವೈಜ್ಞಾನಿಕ ಹೈನುಗಾರಿಕಾ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಸಗುಪ್ಪಿ ಪಶು ಆಸ್ಪತ್ರೆಯ ಪಶು ವೈದ್ಯಕೀಯ ಪರಿಕ್ಷಕರಾದ ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿ ಉತ್ತಮ ತಳಿಯ ಹೈನು ಹಸುಗಳ ಆಯ್ಕೆ ಬಗ್ಗೆ, ಕರುಗಳ ಪಾಲನೆ ಪೋಷಣೆ ಬಗ್ಗೆ, ಕಾಲ ಕಾಲಕ್ಕೆ ಜಂತು ನಿವಾರಕ ಔಷಧಿ ಹಾಕುವ ಬಗ್ಗೆ, ರೋಗ ಪ್ರತಿಬಂಧಕ ಚುಚ್ಚು ಮದ್ದುಗಳನ್ನು ಹಾಕುವುದು,ಜಾನುವಾರುಗಳ ವಿಮೆಯ ಇಲಾಖಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪ ಪೈಲಿ ಮಾತನಾಡಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಈ ಸಮಯದಲ್ಲಿ ಜಿಲ್ಲಾ ಜನ ಜಾಗ್ರತಿ ವೇದಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಗಾಣಿಗೇರ. ಸೇವಾ ಪ್ರತಿನಿಧಿಯಾದ ಭಾರತಿ ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕರಾದ ಕಿರಣ ಸ್ವಾಗತಿಸಿದರು.ಗಜಾನನ ಉಪ್ಪಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರು ರೈತ ಬಾಂಧವರು ಉಪಸ್ಥರಿದ್ದರು.