ಸರಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಪಾಲಕರ ಸಭೆ ಸರಕಾರ ಆದೇಶ ಮಾಡಿದ್ದು ಸ್ವಾಗತಾರ್ಹ.

Share the Post Now

ಹಳ್ಳೂರ.

ಪ್ರತೀ ತಿಂಗಳು ಸಭೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಿ ಹೆಚ್ಚು ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸುವ ಸರಳ ಮಾರ್ಗವೆಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ ಹೇಳಿದರು. ಅವರು ಗ್ರಾಮದ ಶಿವಶಂಕರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ .ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಶಿಕ್ಷಣ ಜೀವನದ ತಳಪಾಯವಿದ್ದಂತೆ  ಉನ್ನತ ಮಟ್ಟದ ಶಿಕ್ಷಣ ಕಲಿತು ಮೇಧಾವಿಗಳಾಗಿರಿ ಮೊಬೈಲ ಟಿವಿ ಕಡೆ ಗಮನ ಕೊಡದೆ ಹೆಚ್ಚು ಅಭ್ಯಾಸದ ಗಮನ ಹರಿಸಿ ವಿದ್ಯಾವಂತರಾಗಿ ರೆಂದು ಹೇಳಿದರು.                      

                   ಪ್ರಧಾನ ಗುರುಗಳಾದ ಆರ್ ಕೆ ಮೆಲಗಡೆ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಶಿಕ್ಷಕರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ನಮ್ಮ ಗಮನಕ್ಕೆ ತಂದರೆ ಸರಿ ಪಡಿಸಿಕೊಳ್ಳುತ್ತೇವೆ ಎಲ್ಲರೂ ಸೇರಿಕೊಂಡು ಶಾಲೆಗೆ ವಿದ್ಯಾರ್ಥಿಗಳ ಇನ್ನಷ್ಟು ಸಂಖ್ಯೆ ಹೆಚ್ಚಿಸಿ ಶಾಲೆಯ ಕೀರ್ತಿ ಬೆಳೆಸೋಣಾ ಎಂದು ಹೇಳಿದರು.                 

       ಬಸಲಿಂಗ ಬಾಗೋಡಿ ಮಾತನಾಡಿ ಮಕ್ಕಳಿಗೆ ದಿನಾಲು ಎಲ್ಲಾ ರೀತಿಯ ಪಾಠ ಕಲಿಸುವದರ ಜೊತೆಗೆ ಮರಳಿ ನೆನಪಿಸಿಕೊಂಡು ಮಕ್ಕಳ ತಲೆಯಲ್ಲಿ ಉಳಿಯುವ ಹಾಗೆ ಶಿಕ್ಷಣ ನೀಡಬೇಕು.ಪಾಲಕರ ಸಭೆಯು ಪ್ರತಿ ತಿಂಗಳು ಅರ್ಥ ಪೂರ್ಣವಾಗಿ ನಡೆಯಿಲಿ ಎಂದು ಹೇಳಿದರು.                             

     ಸಭೆಯಲ್ಲಿ ಮಕ್ಕಳನ್ನು ಎಬ್ಬಿಸಿ ಸರಳ ಪ್ರಶ್ನೆ ಕೇಳಿದಾಗ  ಕೆಲವು ಪ್ರಶ್ನೆಗೆ ಮಾತ್ರ ಉತ್ತರವನ್ನು ನೀಡಿದರು. ಪಾಲಕರು ಮತ್ತು ಶಿಕ್ಷಕರ ಮದ್ಯೆ ಕೆಲವು ವಿಚಾರ ನಡೆದವು.
ಈ ಸಮಯದಲ್ಲಿ ಸಿದ್ದಪ್ಪ ಅಂಗಡಿ.ದುಂಡಪ್ಪ ಕೂಲಿಗೋಡ. ಲಕ್ಷ್ಮಣ ಗಲಗಲಿ. ಸಂಜು ಕೊರೆ. ಕೆಂಪವ್ವ ಅಂಗಡಿ. ಶಿಕ್ಷಕರಾದ ಬಿ ಜೆ ಪಾರ್ಥನಳ್ಳಿ.ರಾಮು ಹರಿಜನ.ಶೋಭಾ ಮುತಾರಿ.ಪಾಲಕರಾದ ನಾಗಪ್ಪ ಬಿಸನಾಳ. ಶಂಕರ ಮಾಲಗಾರ. ಪ್ರಕಾಶ ಲೋಕನ್ನವರ.ಪ್ರಕಾಶ ಬಾಗೋಡಿ.ಸೇರಿದಂತೆ ಅನೇಕರಿದ್ದರು.

Leave a Comment

Your email address will not be published. Required fields are marked *

error: Content is protected !!