ಬೆಳಗಾವಿ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಡಾ ಬಿ.ಆರ್.ಅಂಬೇಡ್ಕರ ಶಿಕ್ಷಣ ಸಂಸ್ಥೆಯ ಅಜೀತ ಬಾನೆ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಹೊಸ ಪ್ರೌಢ ಶಾಲೆ ಕುಡಚಿ. ವಿದ್ಯಾರ್ಥಿನಿ ತನುಜಾ ಸಣ್ಣಕ್ಕಿ ಹರ್ಡಲ್ಸನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಇತ್ತೀಚೆಗೆ ಗೋಕಾಕದಲ್ಲಿ ನಡೆದ ಚಿಕ್ಕೋಡಿ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 80 ಮೀ ಹರ್ಡಲ್ಸದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕಿರ್ತಿ ತಂದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜ ಎಸ್ ಘಾಟಗೆ. ನಿರ್ದೇಶಕರಾದ ಅಮಿತ ಘಾಟಗೆ ಕಾರ್ಯದರ್ಶಿ ಎಸ್ ಆರ್ ಕುಸನಾಳೆ ಸಂಸ್ಥೆಯ ಸಂಚಲಕರಾದ ಬಾಬಾಲಾಲ ಪಿನ್ನಿತೋಡ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಎ ಎಸ್ ಟೊಣ್ಣೆ, ಎಸ್ ಪಿ. ಕಾಂಬಳೆ, ಎಸ್ ಎಸ್ ಭಜಂತ್ರಿ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯನ್ನು ಗೌರವಿಸಿ ಅಭಿನಂದಿಸಿದರು.