ಬೆಳಗಾವಿ.
ರಾಯಬಾಗ ಪಟ್ಟಣದ ಬ್ರೈಟಲ್ಯಾಂಡ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಕ ಸಂತೋಷ ಭಾವಿಗೆ ಅಂತಾರಾಷ್ಟ್ರೀಯ ಸೌತ್ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಓಪನ್ ಚಾಂಪಿಯನಶಿಪನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ಜನೇವರಿ 9ರಿಂದ 13ರ ವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸೌತ್ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಓಪನ್ ಚಾಂಪಿಯನಶಿಪ 2025 ಕ್ರೀಡಾಕೂಟವು ಜರುಗಿದವು.
ಈ ಅಂತಾರಾಷ್ಟ್ರೀಯ ಮಟ್ಟದ ಸೌತ್ ಏಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಓಪನ್ ಚಾಂಪಿಯನಶಿಪ 2025 ಇಂಡಿಯಾ ದಲ್ಲಿ 30 ವಯೋಮಾನದ ಕ್ರೀಡೆಯಲ್ಲಿ ಭಾಗವಹಿಸಿ ಚಕ್ರ ಎಸೆತದಲ್ಲಿ ಹಾಗೂ ಹ್ಯಾಮರ ಎಸೆತದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಜೂತೆಗೆ ಗುಂಡು ಎಸೆತದಲ್ಲಿ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಡಿಸ್ಕಸದಲ್ಲಿ ಶ್ರೀಲಂಕಾದ ಇವನ್ಸ ಫರ್ನಾಂಡೋ ಚಿನ್ನದ ಪದಕ ಪಡೆದರೆ, ಭಾರತದಿಂದ ಸಂತೋಷ ಭಾವಿ ಬೆಳ್ಳಿ ಪದಕ ಪಡೆಯುವ ಮೂಲಕ ಗ್ರಾಮಕ್ಕೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಇವರ ಈ ಸಾಧನೆ ಕಂಡು ಮುಂದಿನ ಕ್ರೀಡೆಗಳಲ್ಲಿ ಭಾಗಿಯಾಗಿ ಹೆಚ್ಚಿನ ಸಾಧನೆ ಮಾಡಲೆಂದು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಶ್ರೀ ವರ್ಧಮಾನ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಿಬ್ಬಂದಿಯವರು ಹತ್ತು ಸಾವಿರ ರೂಪಾಯಿ ಧನ ಸಹಾಯ ಮಾಡಿದರೆ, ಶಿರಗೂರ ಗ್ರಾಮ ಪಂಚಾಯಿತಿ ಪಿಡಿಓ, ಅಧ್ಯಕ್ಷರು, ಉಪಾಧ್ಯಕ್ಷ , ಹಾಗೂ ಸದಸ್ಯರ ವತಿಯಿಂದ ರೂಪಾಯಿ 15000/- ಪ್ರೂತಾಹ ಧನ ನೀಡಿ ಸತ್ಕರಿಸಿ ಅಭಿನಂದಿಸುವ ಮೂಲಕ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ.
ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಸಂತೋಷ ಭಾವಿ ಸಾಧನೆ ಮೇಲೆ ಸಾಧನೆ ಮಾಡುತ್ತಾ ಛಲ ಬಿಡದೆ ಬರುವ ದಿನಗಳಲ್ಲಿ ಜರುಗುವ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಹೊಂದಿದ್ದಾರೆ.
