ಬೆಳಗಾವಿ
ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿಯವರು ಪ್ರತಿ ವರ್ಷದಂತೆ ಈ ವರ್ಷವು ಗೋಕಾಕ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಸಿದ 21ನೇಯ “ಸತೀಶ ಅವಾರ್ಡ್ಸ್- 2025 ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮುಡಲಗಿ ತಾಲೂಕಿನ ಗುಲಗುಂಜಿಕೊಪ್ಪದ ರಾಷ್ಟ್ರ ಮಟ್ಟದ ವಿಲ್ ಚೇರ್ ಕ್ರೀಡಾಪಟು, ವಿಕಲಚೇತನರ ಇಲಾಖೆಯ 2024ರ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಶ್ರೀ ಹನಮಂತ ಲಕ್ಕಪ್ಪಾ ಹಾವನ್ನವರ ರವರ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಅವರಿಗೆ “ಸತೀಶ ಅವಾರ್ಡ್ಸ್ ಗೋಕಾಕ 2025” ಪ್ರಶಸ್ತಿ ನೀಡುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.
ಈ ಭವ್ಯ ವೇದಿಕೆಯ ಸುಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಪ್ಪಾಸಾಹೇಬ ಕುಲಗೋಡೆ, ರಾಯಚೂರು ನಿವೃತ್ತ ಕೃಷಿ ಅಧಿಕಾರಿಗಳಾದ ಶ್ರೀ ವಾಯ್ ಬಿ ಪಾಟೀಲ, ಗೋಕಾಕ ತಾಲೂಕಾ ದಂಡಾಧಿಕಾರಿ ಡಾ ಮೋಹನ ಬಸ್ಮೆ, ಗೋಕಾಕ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜೆ ಬಿ ಬಳಗಾರ, ಮುಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ.ಸೇರಿದಂತೆ ಅನೇಕರಿದ್ದರು.
ಹನಮಂತ ಹಾವನ್ನವರ ರವರಿಗೆ ಪ್ರಶಸ್ತಿ ದೊರೆತಿರವುದಕ್ಕೆ ಜಿಲ್ಲೆಯ ಸಂಘ ಸಂಸ್ಥೆಗಳು,ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.