ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ರವರು ದಿನಾಂಕ 19 ಪೆಬ್ರವರಿ 2025 ರಂದು ರಾಯಬಾಗದಲ್ಲಿ ಜರುಗಲಿರುವ ರಾಯಬಾಗ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ .
ಇದೇ ಪ್ರಥಮ ಬಾರಿಗೆ ರಾಯಬಾಗದಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಮೊದಲ ಮಹಿಳಾ ಸಾಹಿತಿ ಶ್ರೀಮತಿ ಡಾ. ರತ್ನಮ್ಮ ಬಾಳಪ್ಪನವರ ಇವರು ಲೇಖಕಿ, ಕವಯಿತ್ರಿ, ಉಪನ್ಯಾಸಕಿ ಮಾತ್ರವಲ್ಲದೆ ಮಹಿಳಾ ಜಾಗೃತಿ & ರಕ್ಷಣಾ ಸಂಘ(ರಿ)ದ ಮೂಲಕ ಹೋರಾಟಗಾರ್ತಿಯೂ ಆಗಿದ್ದಾರೆ