ಚುಟುಕು ಸಾಬ ಜಾತಗಾರನಿಗೆ ಒಲಿದು ಬಂತು ಗೌರವ ಡಾಕ್ಟರೆಟ್ ಪ್ರಶಸ್ತಿ

Share the Post Now

   ಹಳ್ಳೂರ.

ಮೂಡಲಗಿಯ ಚುಟುಕು ಸಾಬ ಎಂದೇ ಪ್ರಖ್ಯಾತಿ ಪಡೆದ ಸಿದ್ದಿ ಸೋಗು ಕಲಾವಿದ ಚುಟುಕು ಸಾಬ ಇಮಾಮಸಾಬ ಜಾತಗಾರ ಮಂಟೂರ ಅವರ ಸಿದ್ದಿಸೋಗ  ಅವರ ತಂದೆ ತಾಯಿ ಸಿದ್ದಿ ಸೊಗದಿಂದ ರಾಜ್ಯ ಹೊರ ರಾಜ್ಯಗಳ ಹಳ್ಳಿ, ಮನೆ ಮನೆಗೆ ತೆರಳಿ ಹೊಟ್ಟೆ ಪಾಡಿಗಾಗಿ ಸಿದ್ದಿ ಸೋಗ ಹಾಕುವ ವಂಶ ಪಾರಂಪರವಾಗಿ ನಡೆದು ಬಂದಿದೆ ಇತ್ತೀಚಿಗೆ ಹಬ್ಬ ಹರಿದಿನಗಳಲ್ಲಿ, ರಾಷ್ಟ್ರೀಯ ಹಬ್ಬಗಳಲ್ಲಿ ಸಿದ್ದಿ ಸೋಗ ಹಾಕುತ್ತಾ ಬಡ ಕುಟುಂಬದಲ್ಲಿ ವಯಸ್ಸು 60 ಆದರೂ ಸೈಕಲ್ ಮೇಲೆ ಸಂಚಾರ ಮಾಡಿ ಜೀವನ ಸಾಗಿಸುವ ಬಡ ಕುಟುಂಬದ ಕಲಾವಿದನನ್ನು  ಕಲೆಯ ಸಾಧನೆಯನ್ನು ಗುರುತಿಸಿ ತಮಿಳುನಾಡಿನ ಎಷಿಯಿನ್ ಇಂಟರ ನ್ಯಾಷನಲ್ ಕಲ್ಚರ್ ಅಕಾಡೆಮಿ ಅವರು ಕೊಡಮಾಡುವ ಗೌರವ ಡಾಕ್ಟರೆಟ್ ಪ್ರಶಸ್ತಿಗೆ ಬಾಜನರಾಗಿದ್ದಾರೆ.     

                                  ಇತ್ತೀಚಿಗೆ ತಮಿಳುನಾಡಿನ ಏಷ್ಯಾ  ಇಂಟರ ನ್ಯಾಷನಲ್ ಆಡಳಿತ ಮಂಡಳಿಯವರು ಬೆಂಗಳೂರು ಸಮೀಪದ ಹೊಸೂರ ಗ್ರಾಮದಲ್ಲಿ ಆಯೋಜಿಸಿದ್ದ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚುಟುಕುಸಾಬ ಜಾತಗಾರ ಆವರಿಗೆ ಗೌರವ ಡಾಕ್ಟರೆಟ್ ಪ್ರಶಸ್ತಿನ್ನು ನೀಡಿ ಗೌರವಿಸಿದ್ದು ಮೂಡಲಗಿ ತಾಲೂಕಿಗೆ ಸಂತಸ ತಂದಿದೆ.ಮೂಡಲಗಿ ಜಾನಪದ ಕಲಾವಿದರು ಸಂಘ ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  

    ವರದಿ ಮುರಿಗೆಪ್ಪ ಮಾಲಗಾರ

Leave a Comment

Your email address will not be published. Required fields are marked *

error: Content is protected !!