ನಾಮಫಲಕದಲ್ಲಿ ಕನ್ನಡ ಭಾಷೆ ಇರಲಿ
ಕುಡಚಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯ ಎಲ್ಲ
ಅಂಗಡಿಗಳಿಗೆ, ಮತ್ತು ಸರ್ಕಾರಿ ಕಚೇರಿಗಳ ನಾಮ ಫಲಕಗಳನ್ನು, ಕನ್ನಡದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಮೂಲಕ ಉಪತಹಶೀಲ್ದಾರ ಎಸ್.ಜಿ. ದೊಡಮನಿ ಹಾಗೂ ಕುಡಚಿ ಪುರಸಭೆ ಮುಖ್ಯಾಧಿಕಾರಿ, ಬಾಬಾಸಾಹೇಬ ಮಾನೆ ಅವರಿಗೆ ಮನವಿ ಸಲ್ಲಿಸಲಾಯಿತು.
ಕುಡಚಿ ಪುರಸಭೆ, ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳ ನಾಮಫಲಕಗಳು ಹೆಚ್ಚಾಗಿ ಆಂಗ್ಲ ಹಾಗೂ ಇತರೆ ಭಾಷೆಯಲ್ಲಿ ಅಳವಡಿಸಿದ್ದು .
ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಹ ಇಲ್ಲಿಯವರಿಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಾದರೂ ತಕ್ಷಣ ಕ್ರಮ ಕೈಗೊಂಡು, ಬೇರೆ ಬೇರೆ ಭಾಷೆಯಲ್ಲಿರುವ ನಾಮಪಲಗಳನ್ನು ಬರುವ ಫೆ. 11 ರ ಒಳಗೆ ತೇರುವುಗೊಳಿಸಿ, ಕನ್ನಡದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆಗದಿದ್ದರೆ .’ ರಕ್ಷಣಾ ವೇದಿಕೆ, ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಕುಡಚಿ ಘಟಕದ ಅಧ್ಯಕ್ಷ ಅಮೀನದಿನ್ ವಾಟೆ, ಸುಲ್ತಾನ ವಾಟೆ, ಐನೂಧಿನ್ ವಾಟೆ, ಮಂಜು ಬೀರಣಗಿ, ವರ್ಧಮಾನ ಶೆಟ್ಟಿ, ಸಹಧೀಕ ವಾಟೆ, ಶ್ರಿಮಂತ ಗಸ್ತಿ, ಕನ್ನಡ ಜಾಗೃತಿ ವೇದಿಕೆ ಸಂಜೀವ ಬ್ಯಾಕುಡೆ, ಮೌಲಾಲಿ ವಾಟೆ, ಗ್ರಾಮ ಲೆಕ್ಕಾಧಿಕಾರಿ ವಾಯ.ಕೆ.ಹೆಳವರ, ಇತರರು ಉಪಸ್ಥಿತರಿದ್ದರು.
