ಬೆಳಗಾವಿ. ಕುಡಚಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.
ಇದೆ ಸಮಯದಲ್ಲಿ ಪುರಸಭೆ ಅಧ್ಯಕ್ಷ ಹಮಿದೋದಿನ ರೋಹಿಲೆ ಪಟ್ಟಣದ ಸಮಸ್ತ ಜನರ ಪರವಾಗಿ ವಿವಿಧ ಬೇಡಿಕೆಗಳ ಮನವಿ ಮಾಡಿಕೊಂಡರು ಬೆಸಿಗೆ.
ಬೆಸಿಗೆ ಪ್ರಾರಂಭ ಆಗುತಿದ್ದು, ರೈಲು ನಿಲ್ದಾಣಕ್ಕೆ ಎರಡು ಬಾಜು ಪ್ರಯಾಣಿಕರಿಗೆ ಶೇಡ್ ನಿರ್ಮಿಸಿ ನೆರಳಿನ ವ್ಯವಸ್ಥೆ ಕಲ್ಪಿಸುವುದು, ಪ್ರತಿ ಭೋಗಿಯ ನಿಲ್ಲುವ ಸ್ಥಳಕ್ಕೆ ಡಿಸ್ಪ್ಲೇ ಅಳವಡಿಸುವುದು, ಅಂಗವಿಕಲರು, ಬಾಣಂತಿಯರಿಗೆ ಹಿರಿಯ ನಾಗರಿಕರಿಗೆ ಹಾಗೂ ತುರ್ತು ರೋಗಿಗಳಿಗೆ ಲಿಫ್ಟ್ ವ್ಯವಸ್ಥೆ ಬಹಳ ಅವಶ್ಯಕವಾಗಿದೆ, ಸ್ವಚ್ಛ ವೇಟಿಂಗ ಕೊಠಡಿ, ಹಾಗೂ ಅಜಮೇರ, ಸುವರ್ಣ ಜಯಂತಿ ಜೋಧಪುರ ರಿಶಿಕೇಶ ಸೇರಿದಂತೆ ಎಲ್ಲ ವೇಗದೂತ ರೈಲು ನಿಲುಗಡೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಧುರೀಣ ಅಮಿತ ಘಾಟಗೆ, ಜಯಕುಮಾರ ಸನದಿ, ಐಜಾಜ ಬಿಚ್ಚು, ರಾಕೇಶ್ ಕಾಂಬಳೆ, ಐನೋ ವಾಟೆ, ಜಹೂರ ರೋಲೆ, ಜಾವೀದ ರುಕುಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.