ತಹಶೀಲ್ದಾರ್ ಸುರೇಶ ಮುಂಜೆ ನೇತೃತ್ವದಲ್ಲಿ ಅರಣ್ಯ ಸಿದ್ಧೇಶ್ವರ ಜಾತ್ರೆ ಪೂರ್ವಭಾವಿ ಸಭೆ

Share the Post Now


ಬೆಳಗಾವಿ.ಕುಡಚಿ


ಸಮೀಪದ ಯಲ್ಪಾರಟ್ಟಿಯ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆ ಬರುವ  ಗುರುವಾರ ಮಾರ್ಚ್ 06ರಿಂದ  10 ವರೆಗೆ ಜರುಗಲಿದ್ದು, ಸೋಮವಾರ ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಪೂರ್ವ ಭಾವಿ ಸಭೆ    ಜರುಗಿತು.

ಸಭೆಯಲ್ಲಿ ತಾಲೂಕು ದಂಡಾಧಿಕಾರಿ ಸುರೇಶ ಮುಂಜೆ ಮಾತನಾಡಿ ಜಾತ್ರೆಗೆ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದ್ದು ಹಾಗೂ ಸಾವಿರಾರು ಎತ್ತಿನ ಬಂಡಿಗಳು ಬರುತ್ತವೆ ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ತಮ್ಮ ಅದಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.



ಜಾತ್ರೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಪೊಲೀಸ್ ಇಲಾಖೆ ಸಿಪಿಐ ಮತ್ತು ಪಿಎಸ್‌ಐಗಳವರಿಗೆ ನಿರ್ದೇಶನ ನೀಡಿದರು.

ಜಾತ್ರೆಯ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಟ್ರಸ್ಟ್ ಕಮಿಟಿಯವರು ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡ ಹೆಸ್ಕಾಂ ಅವರ ಜೊತೆ ಸಹಕರಿಸಿ ಸರಿಯಾದ ವಿದ್ಯುತ್ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಜಾತ್ರೆ ಶಾಂತಿಯುತವಾಗಿ ನಡೆಯಬೇಕು ಯಾವುದೇ ಕಾರಣಕ್ಕೂ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಮತ್ತು ಆರೋಗ್ಯ ಇಲಾಖೆಯವರು ಕಾಳಜಿ ವಹಿಸಬೇಕೆಂದು ಸೂಚಿಸಿದರ.

ಸಭೆಯಲ್ಲಿ ಸತ್ತೆಪ್ಪ ಅಥಣಿ,  ಸುನಿಲ್ ಬಿ.ಪಾಟೀಲ್,  ಅಮಿತ್ ಖವಟಕೊಪ್ಪ,  ಮಹಾಂತೇಶ್ ಗುಡೋಡಗಿ,  ಮಲಕಾರಿ ದಳವಾಯಿ,  ಅಶೋಕ್ ಗುಡೋಡಗಿ,  ಚಿದಾನಂದ ಗುಡೋಡಗಿ, ಚಿದಾನಂದ ಖವಟಕೊಪ್ಪ,  ಮಹಾದೇವ ತೇರದಾಳ,  ಆರ್. ಎಸ್ ಗುಡೋಡಗಿ, ಸದಾಶಿವ ಖವಟಕೊಪ್ಪ,  ಅಶೋಕ್ ಸವದಿ,  ಚಾಮರಾಜ ವಡೆಯರ ಖೇಮಲಾಪುರ ಮತ್ತು ಯಲ್ಪಾರಟ್ಟಿ ಗುರು ಹಿರಿಯರು ಉಪಸ್ಥಿತರಿದ್ದರು ಪ್ರೊ. ರುದ್ರಪ್ಪ ಗುಡೋಡಗಿ ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!