ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ  ರೇವತಿ ಮಠದ

Share the Post Now

               ಬೆಳಗಾವಿ                      ಹಳ್ಳೂರ .ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟದ ಶಿಕ್ಷಣ ಕಲಿತು  ದೊಡ್ಡ ಹುದ್ದೆಗಳನ್ನು ಅಲಂಕಸಿಕೊಂಡು ಮೇಧಾವಿಗಳಾಗಿರೆಂದು ಜಿಲ್ಲಾ ಉಪ ಯೋಜನಾ ಸಮನ್ವಯ ಅಧಿಕಾರಿ ರೇವತಿ ಮಠದ ಹೇಳಿದರು.      

        ಅವರು ಗ್ರಾಮದ ಬ ಕು ಮ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ಅನ್ನುವ ಭಯ ಪಡದೆ ಇದು ಜೀವನದ ತಳಪಾಯವಿದ್ದಂತೆ ಅದನ್ನು ಗಟ್ಟಿಗೊಳಿಸಿದರೆ ಮಾತ್ರ ಜೀವನದಲ್ಲಿ ಸಾದಿಸುವ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳು ಟಿವಿ ಮೊಬೈಲ್ ಹಾಗೂ ದುಷ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೆ  ಕೆಟ್ಟವರ ಸಂಘ ಮಾಡದೆ ಸನ್ಮಾರ್ಗದಲ್ಲಿ ಸಾಗಿರಿ ತಂದೆ ತಾಯಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಜೀವನ ಉದ್ದಾರ ಮಾಡಿಕೊಳ್ಳಿರೆಂದು ಹೇಳಿದರು.

ಮುಖ್ಯೋಪಾಧ್ಯಾಯ ಎಂ ಎನ್ ಕುಲಕರ್ಣಿ ಮಾತನಾಡಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಲುಭಾ ಕುಲಕರ್ಣಿ.ನಿವೃತ್ತ ಶಿಕ್ಷಕ ಪಿ ಎಸ್ ಈರಡ್ಡಿ.ಮುರಿಗೆಪ್ಪ ಮಾಲಗಾರ ಆರ್ ಎಂ ತೆಲಸಂಗ. ಎಂ ಟಿ ದಡ್ಡಿಮನಿ. ಎಸ್ ಎಲ್ ಪೂಜೇರಿ. ಎಂ ಟಿ ಪಟಾಣಿ. ವಿ ಎಸ್ ನಾರಾಯಣಕರ ಸೇರಿದಂತೆ ಗ್ರಾಮದ ಗುರು ಹಿರಿಯರು ಶಾಲೆಯ ಸಿಬ್ಬಂದಿಗಳು,ಆಡಳಿತ ಮಂಡಳಿ, ಹಾಗೂ ವಿದ್ಯಾರ್ಥಿಗಳಿದ್ದರು.

Leave a Comment

Your email address will not be published. Required fields are marked *

error: Content is protected !!