ಬೆಂಗಳೂರು.
ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಆನಂದಿ ನೃತ್ಯ ಆಕಾಡೆಮಿ ಬೆಂಗಳೂರು ಅವರು ರವಿವಾರದಂದು ಅಕ್ಕ ಮಹಾದೇವಿ ಸಭಾ ಭವನದಲ್ಲಿ ನಡೆಯುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 2025 ನೇ ಸಾಲಿನಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಬಡವರ ಬಂದು ಕಾಯಕ ಯೋಗಿ ನಿರಂತರ ಸಮಾಜ ಸೇವೆ,
ಜೊತೆಗೆ ಪ್ರಾಮಾಣಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುರಿಗೆಪ್ಪ ಮಾಲಗಾರ ಆವರಿಗೆ ಸುವರ್ಣ ಕರ್ನಾಟಕ ಸಾದಕ ಮಾಧ್ಯಮ ರತ್ನ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಿ ಗೌರವಿಸಲಾಗುವುದೆಂದು ಬೆಂಗಳೂರು ಸಮಾಜ ಕಲ್ಯಾಣ ಸಂಸ್ಥೆಯ ರಾಜ್ಯಾ ಧ್ಯಕ್ಷರಾದ ವೀಣಾ ಕಿಡದಾಳ. ಬೆಂಗಳೂರು ವಿಶ್ವ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಸುರೇಶ ವಾಗಮೋಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.