ಹಳ್ಳೂರ. ಗ್ರಾಮದಲ್ಲಿ ಕಂಬಿ ಐದೇಶಿ ಕಾರ್ಯಕ್ರಮವು ಅತೀ ವಿಜೃಂಭಣೆಯಿಂದ ಜರುಗಿತು.
ಕಲ್ಮೇಶ್ವರ ದೇವಸ್ಥಾನದಲ್ಲಿ ನಸುಕಿನ ಸಮಯದಿಂದ ಕೆಲವು ಗಂಟೆಯವರೆಗೆ ಜೋಡು ಕಂಬಿ ಮಲ್ಲಯ್ಯನ ಮುಂದೆ ಆರತಿ ದಿವಟಗಿ ದೀಪಗಳು ಉರಿಯುತ್ತಿದ್ದವು. ನಂತರ ಶ್ರೀಶೈಲಕ್ಕೆ ಹೋಗಿ ಬಂದವರ ಮನೆತನ ಹೆಸರಿನಲ್ಲಿ ಜಂಗಮರು ಕಂಬಿ ಮಲ್ಲಯ್ಯ ನನ್ನು ಹೊತ್ತು ಕೊಂಡು ಬಿರುದಾವಳಿ ಹಾಕಿದರು.
ನಂತರ ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಆರತಿ, ದಿವಟಗಿ ವಿವಿಧ ವಾದ್ಯ ಮೇಳದೊಂದಿಗೆ ಪ್ರತಿ ವರ್ಷವಿರುವ ಸ್ಥಳಕ್ಕೆ ಕಂಬಿ ಮಲ್ಲಯ್ಯ ಕೂಡ್ರಿಸಿ ಮಂಗಳಾರುತಿ ಮಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಈ ಸಮಯದಲ್ಲಿ ಗ್ರಾಮದ ಜಂಗಮರು,ಗುರು ಹಿರಿಯರು, ನೂರಾರು ಜನ ಮಹಿಳೆಯರಿದ್ದರು.