ಸಾಮಾಜಿಕ, ಸಮಾನತೆಯ, ಶಿಕ್ಷಣದ ಹರಿಕಾರ ಮಹಾತ್ಮ ಜ್ಯೋತಿಭಾ ಪುಲೆ ಈರಣ್ಣ ಕಡಾಡಿ

Share the Post Now

                  ಮೂಡಲಗಿ:

ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಮಾನತೆ, ಸಾಮಾಜಿಕ ಹರಿಕಾರ ಶಿಕ್ಷಣದ ಕ್ರಾಂತಿ ಜ್ಯೋತಿ ಮಹಾತ್ಮ  ಜ್ಯೋತಿರಭಾ ಫುಲೆ  ಅವರು ಸಮಾಜಕ್ಕೆ ನೀಡಿದ ಅಮೂಲ್ಯವಾದ ಕೊಡುಗೆ ಅಪಾರವಾದದ್ದು. ಯುವಕರು  ಸ್ಫೂರ್ತಿ ನೀಡುತ್ತದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.


ಮೂಡಲಗಿ ಪಟ್ಟಣದ ವಿದ್ಯಾನಗರ ಜ್ಯೋರ್ತಿಲಿಂಗ ಬ್ಯಾಂಕ್‌ ಹತ್ತಿರ ನಡೆದ ಮಹಾತ್ಮ ಶ್ರೀ ಜ್ಯೋತಿಬಾ ಫುಲೆಯವರ 198ನೇ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು   ಭಾರತದಲ್ಲಿ  ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಮತ್ತು ತುಳಿತಕ್ಕೊಳಗಾದವರನ್ನು ಸಬಲೀಕರಣಗೊಳಿಸಲು ಮಾಡಿದ ಅವಿರತ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು.’ಸತ್ಯಶೋಧಕ ಸಮಾಜ ಸುಧಾರಕ ಸಮಾಜ’ ಸ್ಥಾಪನೆಯ ಮೂಲಕ,

ಸಮಾಜವನ್ನು ದುಷ್ಕೃತ್ಯಗಳಿಂದ ಮುಕ್ತಗೊಳಿಸುವಲ್ಲಿ ಅವರು ಗಮನಾರ್ಹ ಕೆಲಸ ಮಾಡಿದರು. ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಮೂಲಕ ಸಾಮಾಜಿಕ ಬದಲಾವಣೆಗೆ ಅಡಿಪಾಯ ಹಾಕಿದ ಮಹಾತ್ಮರ ಜೀವನವು ಅನುಕರಣೀಯವಾಗಿದೆ ಅವರ ಮಾನವೀಯತೆ ಮೆಚ್ಚುವಂತಹದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾತನಾಡಿ ಮಹಾತ್ಮ ಜ್ಯೋತಭಾ ಪುಲೆ ಅವರು ಮಹಾನ ಪುರುಷರಲ್ಲಿ ಒಬ್ಬರು ಬಡವ ಹಿಂದುಳಿದವರ ಆಶಾಕಿರಣ ಬಾಳಿಗೆ ಬೆಳಕನ್ನು ನೀಡಿದ ಪುಲೆ ಅವರ ತತ್ವ ಆದರ್ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗುವದರ ಜೊತೆಗೆ ನಾವು ಸಮಾಜಕ್ಕೆ ಕೊಡುಗೆ ನೀಡೋಣಾ ಎಂದು ಹೇಳಿದರು. ಪ್ರಾರಂಭ ದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಅವರ ಭಾವ ಚಿತ್ರಕ್ಕೆ ಪೂಜೆಯನ್ನು ನಿಪನಾಳ ಪ್ರಭು ಸ್ವಾಮಿ ಅವರು ನೆರವೇರಿಸಿದರು. ಮೂಡಲಗಿ ಪ್ರಮುಖ ಬಿದಿಗಳಲ್ಲಿ ಜ್ಯೋತಿಭಾ ಪುಲೆ ಅವರ ಭಾವ ಚಿತ್ರ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.     ಮುರಿಗೆಪ್ಪ ಮಾಲಗಾರ ಅವರು ಸ್ವಾಗತಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮಾಳಿ ಸಮಾಜದ ಮುಖಂಡ, ಮುತ್ತಪ್ಪ ಈರಪ್ಪಣ್ಣವರ, ಈರಪ್ಪ ಬನ್ನೂರ, ಚನ್ನಬಸಪ್ಪ ಬಡ್ಡಿ, ಲಕ್ಷ್ಮಣ ಮಾಲಗಾರ. ಗಿರೀಶ ಡವಳೇಶ್ವರ. ಭೀಮಪ್ಪ ಅವರಾದಿ, ಮಲ್ಲಪ್ಪ ಮುತಾರಿ, ಶಂಕರ ಕೊತ್ತಂಬರಿ. ಬಸವರಾಜ

ಮಾಲಗಾರ.ಯಲ್ಲಪ್ಪ ಖಾನಪ್ಪಗೋಳ. ಮುರಿಗೆಪ್ಪ ಮಾಲಗಾರ. ಮಹಾದೇವ ಬಡ್ಡಿ. ಶಿವಬಸು ಹಂದಿಗುಂದ, ಚಂದ್ರು ಗಾಣಿಗ, ಈರಪ್ಪ ಢವಳೇಶ್ವರ.ಪ್ರಕಾಶ ಈರಪ್ಪನವರ.ಬಸವರಾಜ ಪಾಟೀಲ. ಅರುಣ ಗುಲಗಾಜಂಬಗಿ.ಕುಮಾರ ಗಿರಡ್ಡಿ. ಗುರು ಗಂಗಣ್ಣವರ. ಈಶ್ವರ ಮುರಗೋಡ. ಬಸವರಾಜ ಪಾಲಭಾವಿ. ಮಲ್ಲಪ್ಪ ಬಾಳಿಕಾಯಿ. ಮಲ್ಲಪ್ಪ ಮಧುಗುನುಕಿ. ಮಲ್ಲು ಡವಳೇಶ್ವರ. ಸದಾಶಿವ ಕಾನಪ್ಪಗೋಳ ಸೇರಿದಂತೆ ಅನೇಕ ಗಣ್ಯರು ಹಾಗೂಸಮಾಜದ ಬಾಂಧವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!